ಮಂಗಳೂರು: ಇಲ್ಲಿನ ಪ್ರಮುಖ ಜನನಿಬಿಡ ಪ್ರದೇಶ ಪಂಪ್ವೆಲ್ ಮೇಲ್ಸೇತುವೆ ಮೇಲೆ ಬಜರಂಗದಳದ ಕಾರ್ಯಕರ್ತರು ವೀರ ಸಾವರ್ಕರ್ ಬ್ಯಾನರ್ ಮತ್ತೆ ಅಳವಡಿಸಿರುವ ಘಟನೆ ಇಂದು ರಾತ್ರಿ ನಡೆದಿದೆ.
ಪುತ್ತೂರು ಸಮೀಪದ ಕಬಕದಲ್ಲಿ ನಿನ್ನೆ ಎಸ್ ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥಯಾತ್ರೆಯಲ್ಲಿನ ಸಾವರ್ಕರ್ ಫೋಟೋ ತೆಗೆಯಲು ಕ್ಯಾತೆ ತೆಗೆದು ವಿವಾದಕ್ಕೀಡಾದ ಬೆನ್ನಲ್ಲೇ ಮತ್ತೆ ಕರಾವಳಿಯಲ್ಲಿ ಕೋಮುದ್ವೇಷ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ.
ಈ ಹಿಂದೆ ಪಂಪ್ವೆಲ್ ಮೇಲ್ಸೇತುವೆ ಮೇಲೆ ಅಳವಡಿಸಿದ್ದ ಸಾವರ್ಕರ್ ಬ್ಯಾನರ್ ಅನ್ನು ತೆರವುಗೊಳಿಸಲಾಗಿದ್ದು, ಇದೀಗ ಮತ್ತೆ ಭಜರಂಗದಳದ ಕಾರ್ಯಕರ್ತರು ನಗರದ ವಿವಿಧೆಡೆ ಸಾವರ್ಕರ್ ಬ್ಯಾನರ್ ಅಳವಡಿಸಿದ್ದಾರೆ.
ಮಂಗಳೂರಿನ ಕಂಕನಾಡಿ ರೈಲ್ವೇ ನಿಲ್ದಾಣಕ್ಕೂ ವೀರ ಸಾವರ್ಕರ್ ರೈಲ್ವೇ ನಿಲ್ದಾಣ ಎಂಬ ಬ್ಯಾನರ್ ಅಳವಡಿಸಿರುವುದಾಗಿ ತಿಳಿದುಬಂದಿದೆ.