Ad Widget .

ಪುತ್ತೂರು: ಮನೆ ಕೆಡವಿದ ಆರೋಪ: ದೇವಾಲಯದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಪ್ರಕರಣ ದಾಖಲು

Ad Widget . Ad Widget .

ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಸ್ಥಳದಲ್ಲಿ ವಾಸವಿದ್ದ ಕುಟುಂಬದ ಮನೆಯನ್ನು ಕೆಡವಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಕರಣದ ಆರೋಪಿ.

Ad Widget . Ad Widget .

ದೇವಳದ ಮತ್ತು ನಗರಸಭೆ ಅನುಮತಿ ಪಡೆಯದೆ ಪತ್ರಕರ್ತ ಸಹೋದರರಾದ ಶೇಖ್ ಇಸಾಕ್ ಮತ್ತು ಶೇಖ್ ಜೈನುದ್ದೀನ್, ಕುಟುಂಬದವರು ತಾವಿರುವ ಹಳೆಯ ಮನೆಯನ್ನು ಕೆಡವಿ ಸ್ಥಳವನ್ನು ಕಬಳಿಸಿ ಅಕ್ರಮವಾಗಿ ಮೂರು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ರೀತಿ ದಿನೇಶ್ ಜೈನ್ ಎಂಬಾತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿಯವರ ನೇತೃತ್ವದಲ್ಲಿ ಫೆ.2ರಂದು ಬೆಳ್ಳಂಬೆಳಗ್ಗೆ ಪೊಲೀಸ್ ಬಂದೋಬಸ್ತಿನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ತಮ್ಮ ಮನೆ ಹಾಗೂ ಸ್ಥಳವನ್ನು ಸಂಪೂರ್ಣವಾಗಿ ಕೆಡವಿ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಶೇಖ್ ಇಸಾಕ್ ಮತ್ತು ಶೇಖ್ ಜೈನುದ್ದೀನ್, ಸಹೋದರರು ದೇವಸ್ಥಾನದ ಅಧೀನದಲ್ಲಿ ನೆಲ್ಲಿಕಟ್ಟೆಯಲ್ಲಿರುವ ಜಾಗದಲ್ಲಿ ತಮ್ಮ ಪೂರ್ವಜರ ಕಾಲದಿಂದಲೇ ಕಾನೂನು ಬದ್ಧವಾಗಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದರು. ಅದರೆ ಕಳೆದ ಫೆ. 2ರಂದು ಬೆಳ್ಳಂಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಇತರರೊಂದಿಗೆ ಸೇರಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.
ಅದಲ್ಲದೆ ನಾವು ವಾಸವಾಗಿರುವ ಜಾಗ ಮತ್ತು ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೆಸಿಬಿ ಮುಖಾಂತರ ತಾವು ವಾಸವಾಗಿದ್ದ ಮನೆ ಸ್ಥಳವನ್ನು ಸಂಪೂರ್ಣವಾಗಿ ಕೆಡವಿ ನಾಶಪಡಿಸಿದ್ದಾರೆ. ಇದರಿಂದಾಗಿ ನಮಗೆ ಸುಮಾರು 5 ಲಕ್ಷ ರೂ.ಗಳಿಗೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ಶೇಖ್ ಇಸಾಕ್‍ರವರು ಪುತ್ತೂರಿನ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್(ಹಿರಿಯ ವಿಭಾಗ) ಮತ್ತು ಎ.ಸಿ.ಜೆ.ಎಂ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅವರ ದೂರನ್ನು ಸ್ವೀಕರಿಸಿರುವ ನ್ಯಾಯಾಲಯ ಆರೋಪಿ ನವೀನ್ ಭಂಡಾರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪುತ್ತೂರು ನಗರ ಪೆÇಲೀಸರಿಗೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದಂತೆ ನವೀನ್ ಭಂಡಾರಿಯವರ ವಿರುದ್ಧ ಸೆಕ್ಷನ್ 427,447,504, 506ರಡಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರುದಾರರ ಪರವಾಗಿ ವಕೀಲ ಗ್ರೆಗೋರಿ ಡಿ’ಸೋಜ ವಾದಿಸಿದ್ದರು. ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಪುತ್ತೂರು ನಗರ ಪೊಲೀಸರು ಈಗಾಗಲೇ ನೆಲ್ಲಿಕಟ್ಟೆಯಲ್ಲಿದ್ದ ಮನೆ ಕೆಡವಲಾಗಿದ್ದ ಸ್ಥಳದ ಮಹಜರು ನಡೆಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ‌ ನವೀನ್ ಭಂಡಾರಿ ‘ ಪ್ರಕರಣ ನ್ಯಾಯಾಲಯದ ತನಿಖೆಯಲ್ಲಿದೆ’ ಎಂದು ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *