Ad Widget .

ಮೂರು ತಿಂಗಳ ಹಸುಳೆ ಮೇಲೆ ಎರಗಿದ ಅಪ್ರಾಪ್ತ ವಿಕೃತಕಾಮಿ

Ad Widget . Ad Widget .

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಅಪ್ರಾಪ್ತನೊಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಹಸುಳೆಯ ತಾಯಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ವೇಳೆ ಈತ ಹೀಗೆ ಮಾಡಿದ್ದಾನೆ. ಎಮ್ಮೆಗಳನ್ನು ಕಟ್ಟಿ ಮರಳಿದ ತಾಯಿ ಅಳುತ್ತಿದ್ದ ತನ್ನ ಮಗುವನ್ನು ಅಪ್ರಾಪ್ತ ಸಮಾಧಾನ ಮಾಡುತ್ತಿರುವುದನ್ನು ಕಂಡಿದ್ದಾರೆ.

ಈ ವೇಳೆ ಮಗುವಿನ ಖಾಸಗಿ ಅಂಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಮಗುವಿನ ತಾಯಿಗೆ ಅಲ್ಲಿ ಏನಾಗಿದೆ ಎಂಬುದು ಅರಿವಿಗೆ ಬಂದಿದೆ. ಕೂಡಲೇ ಹಸುಳೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಆಪಾದಿನತ ಮೇಲೆ ಭಾರತೀಯ ದಂಡ ಸಂಹಿತೆಯ 376ನೇ ವಿಧಿ ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆಪಾದಿತ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.

Leave a Comment

Your email address will not be published. Required fields are marked *