Ad Widget .

ಪಿಚ್ ನಲ್ಲೇ ಓಡ್ತಿದೇನೆ,ನಿನ್ನ ಮನೆಯಲ್ಲಿ ಅಲ್ಲ| ಪರಸ್ಪರ ಬೈದಾದಿಕೊಂಡ ಕೊಹ್ಲಿ- ಆ್ಯಂಡರ್ಸನ್

Ad Widget . Ad Widget .

ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್‌ ಜೇಮ್ಸ್‌ ಆಂಡರ್ಸನ್‌ ನಡುವೆ, ಇಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿಯ 2ನೇ ಹಣಾಹಣಿಯಲ್ಲಿ ಮಾತಿನ ಯುದ್ದವೇ ನಡೆದಿದೆ.

Ad Widget . Ad Widget .

ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ, ಪದೇ ಪದೇ ಸ್ಲೆಡ್ಜಿಂಗ್‌ ಮೂಲಕ ಕೆಣಕುತ್ತಿದ್ದ ಜೇಮ್ಸ್‌ ಆಂಡರ್ಸನ್‌ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಪಂದ್ಯದ ಮೂರನೇ ದಿನಾಟದಲ್ಲೇ ಸ್ಲೆಡ್ಜಿಂಗ್‌ ಶುರು ಮಾಡಿದ್ದ ಆಂಡರ್ಸನ್‌, ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ನಿಂದಿಸಲು ಆರಂಭಿಸಿದ್ದರು. ಬಳಿಕ ನಾಲ್ಕನೇ ದಿನದಾಟದಲ್ಲೂ ತಮ್ಮ ನಾಲಿಗೆ ಹರಿಬಿಟ್ಟಿದ್ದ ಆಂಡರ್ಸನ್‌, ಕ್ಯಾಪ್ಟನ್‌ ಕೊಹ್ಲಿ ಪಿಚ್‌ ಮೇಲೆ ಓಡುತ್ತಿದ್ದಾರೆ ಎಂದು ಅಂಪೈರ್‌ ಬಳಿ ದೂರು ನೀಡಿದರು.

ಇದಕ್ಕೆ ಖಡಕ್ ಉತ್ತರವನ್ನೇ ಕೊಟ್ಟ ಕೊಹ್ಲಿ, “ಪಿಚ್‌ ನಿನ್ನ ಮನೆಯಲ್ಲ. ಪಿಚ್‌ ಮೇಲೆ ನಾನು ಓಡುತ್ತಿದ್ದೇನೆ ಎಂದು ನಿನ್ನಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ವಯಸ್ಸಾಗುತ್ತಿದ್ದಂತೆ ನೀನು ಕಲಿತಿರುವುದು ಇಷ್ಟೇ,” ಎಂದು ಆ್ಯಂಡರ್ಸನ್ ಗೆ ಕೊಹ್ಲಿ ಬಿಸಿ ಮುಟ್ಟಿಸಿದರು.

Leave a Comment

Your email address will not be published. Required fields are marked *