Ad Widget .

‘ರಾಷ್ಟ್ರಗೀತೆ ಬಗ್ಗೆ ಕಾಮನ್​ ಸೆನ್ಸ್​ ಇಲ್ವಾ?’| ಸುದೀಪ್ ಗೆ ಖಾರವಾಗಿ ಪ್ರತಿಕ್ರಿಯಿಸಿದ ಅಭಿಮಾನಿ| ತಪ್ಪೊಪ್ಪಿಕೊಂಡ ಕಿಚ್ಚ.

Ad Widget . Ad Widget .

ಆ.15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುವ ಮೂಲಕ ಆಚರಣೆ ಜೋರಾಗಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್​ ಅವರು ರಾಷ್ಟ್ರಗೀತೆ ಹಾಡಿ, ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡರು. ಅದಕ್ಕೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸುದೀಪ್​ ಅವರು ಭಕ್ತಿ-ಭಾವದಿಂದ ಹಾಡಿದ ಪರಿ ಕಂಡು ಅಭಿಮಾನಿಗಳು ಕೂಡ ಸೆಲ್ಯೂಟ್​ ಮಾಡಿದರು. ಆದರೆ ಕೆಲವರಿಗೆ ಅದರಲ್ಲೊಂದು ತಪ್ಪು ಕಾಣಿಸಿತು!

Ad Widget . Ad Widget .

ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್​ ಒಳಗೆ ಹಾಡಬೇಕು. ಆದರೆ ಸುದೀಪ್​ ಅವರು ಅಂದಾಜು 65 ಸೆಕೆಂಡ್​ಗಳಲ್ಲಿ ಹಾಡಿದರು. ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್​ ಮಾಡಿದ್ದಾರೆ. ‘ಸರಿಯಾಗಿ ರಾಷ್ಟ್ರಗೀತೆ ಹಾಡಿ ಸರ್​. ನಿಮ್ಮನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ನೀವು ಟಾಪ್​ ನಟ ಆಗಿರಬಹುದು. ಆದರೆ 48-52 ಸೆಕೆಂಡ್​ಗಳ ಒಳಗೆ ಹಾಡಬೇಕು ಎನ್ನುವ ಕಾಮನ್​ ಸೆನ್ಸ್​ ಕೂಡ ಇಲ್ವಾ?’ ಎಂಬ ಕಮೆಂಟ್ ಬಂದಿದೆ. ಅದಕ್ಕೆ ಸುದೀಪ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಇದು (ಕಮೆಂಟ್​) ತುಂಬ ಒರಟಾಗಿದೆ. ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಅನಿಸಿತೋ ಅದನ್ನು ಮಾಡಿದ್ದೇನೆ. ಜೈ ಹಿಂದ್​’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ. ತಪ್ಪು ಒಪ್ಪಿಕೊಂಡ ಅವರ ನಡೆಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಇದು ನಿಮ್ಮ ದೊಡ್ಡ ಗುಣ. ನೀವು ನಿಜವಾದ ಜಂಟಲ್​ಮನ್​’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.​

ಸುದೀಪ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಟ್ವಿಟರ್​ನಲ್ಲಿ ಅವರಿಗೆ 25 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಟ್ವೀಟ್​ಗಳ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾರೆ. ‘ನೆಗೆಟಿವ್​ ಕಮೆಂಟ್​ ಮಾಡುವವರಿಗೆ ಪ್ರತಿಕ್ರಿಯೆ ನೀಡಬೇಡಿ ಸರ್​’ ಎಂದು ಹಲವು ಅಭಿಮಾನಿಗಳು ಕಿಚ್ಚನ ಬಳಿ ಮನವಿ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *