Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

Ad Widget . Ad Widget .

ವಾರಭವಿಷ್ಯ ಆ.15ರಿಂದ 21ರವರೆಗೆ

Ad Widget . Ad Widget .

ಮೇಷ

ಮೇಷ ರಾಶಿಯಲ್ಲಿ ಜನಿಸಿದವರಿಗೆ ದ್ವಿತೀಯ ರಾಹುವಿರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣವಿದೆ. ಏಕಾದಶ ದಲ್ಲಿರುವ ಗುರುವು ಪಾಪಗಳ ಭಾರವನ್ನು ಎಷ್ಟು ಹೊರಲು ಸಾಧ್ಯವೆಂದು ನಿರ್ಣಯಿಸುತ್ತಾನೆೆ. ಜಾಗರೂಕರಾಗಿರಿ. ಖಿನ್ನತೆಗೆ ಒಳಗಾಗದಿರಿ. ಅನಂತವಾಗಿ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ.

ವೃಷಭ

ಲಗ್ನದಲ್ಲಿ ರಾಹುವಿರುವುದರಿಂದ ಪೆದ್ದುತನ ತೋರಿಸಿಕೊಳ್ಳಬೇಡಿ. ಮುಖದ ಕಾಂತಿಗೆ ಪೇಚಿಗೆ ಸಿಲುಕುವುದೂ ಬೇಡ. ವಿಷಯ ವಿಮಶಿಸಿ ಅರ್ಥ ಮಾಡಿಕೊಂಡು ನಡೆದರೆ ಶುಭ. ನಿಮ್ಮ ಧರ್ಮದ ಧನವು ಬರಬೇಕಾದರೆ, ‘ದುಂ ದುರ್ಗಾಯೈ ನಮಃ’ ಮಂತ್ರ ಪ್ರಾರ್ಥಿಸಿ.

ಮಿಥುನ

9ರ ಗುರುವು ಶೇ.99ರಷ್ಟು ಶುಭಫಲ ಕೊಡುತ್ತಾನೆ.ಶನಿ ಸ್ವಕ್ಷೇತ್ರದ 8ನೇ ಮನೆಯಲಿದ್ದಾನೆ. ಗೃಹಗಳ ಚಲನೆ ಸುಖ ನೀಡದಿದ್ದರೂ, ದೇವರ ಅನುಗ್ರಹ ಇದ್ದರೆ ಸಾಕು. ತಪ್ಪದೇ 6ರ ಕೇತು, 12ರ ರಾಹುವಿಗೆ ‘ದ್ವಿಷಡ್ಬುಜಂ ಷಣ್ಮುಖಂ ಅಂಬಿಕಾಸುತಂ| ಕುಮಾರಂ ಆದಿತ್ಯ ಸಮಾನ ತೇಜಸಂ ಅಗ್ನಿಸಂಭವಂ ವಂದೇ ಮಯೂರಾಸನಂ| ಸೇನಾನ್ಯ ಮಾದ್ಯಂ ಮಮಚ ಇಷ್ಟಸಿದ್ಧಯೇ’ ಈ ಮಂತ್ರ ಪಾರಾಯಣ ಮಾಡಿ.

ಕಟಕ

ಹರಿದ ನೀರು ತಿಳಿಯಾಗುತ್ತದೆ. ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಿ. ಅತಿವೇಗದಲ್ಲಿ ಕೆಲಸ ಬೇಡ. ತಾಳ್ಮೆ ಇರಲಿ. ಶನಿ-ಗುರು ಕೆಲವೊಂದು ಉದ್ವಿಗ್ನತೆಯನ್ನು ಉಂಟುಮಾಡಬಹುದು. ರಾಮನ ಧ್ಯಾನವಿರಲಿ. ‘ಓಂ ರಂ ರಾಮಾಯ ಸ್ವಾಹಾ’ ಮಂತ್ರ ಜಪವು ಸದಾಕಾಲ ಇರಲಿ.

ಸಿಂಹ

ಸೂರ್ಯನ ಬೆಳಕನ್ನು ಯಾರೂ ಸರಿಸಲಾಗುವುದಿಲ್ಲ. ಕತ್ತಲ ಕೋಣೆಗೆ ಸೂರ್ಯನ ಬೆಳಕನ್ನು ತರಲಾಗುವುದಿಲ್ಲ. ನಿಮ್ಮ ಶುದ್ಧ ಮನಸ್ಸು, ಮಹಾಸಂಕಲ್ಪ ಇಟ್ಟುಕೊಂಡು ದೇವರನ್ನೇ ಕಾಣಬಹುದು. ಶುಭ ಗ್ರಹಗಳ ಸಂಪರ್ಕವಿದೆ. ಧರ್ಮಯುಕ್ತರಾಗಿರಿ. ಬೇಡಿದ್ದನ್ನು ಕೊಡಲು ದೇವರಿದ್ದಾನೆ. ಮುಂದೆ ಸಾಗಿ ಎಲ್ಲರಿಗೂ ಸಹಾಯವನ್ನು ಮಾಡಿರಿ.

ಕನ್ಯಾ

ಕನ್ಯಾರಾಶಿಯವರಿಗೆ ಅಕಾಲಿಕ ಶಾಪದಿಂದ ಯಾರಾದರೂ ಸ್ವತ್ತನ್ನು ಕಿತ್ತುಕೊಳ್ಳಬಹುದು. ಕಾರಣ ಪಂಚಮ ಶನಿ ಷಷ್ಠ ಗುರು, ಪೂರ್ವಪುಣ್ಯ ವನ್ನೂ ನಿಮ್ಮ ಖಾತೆಯಲ್ಲಿ ಚಿತ್ರಗುಪ್ತನು ಬರೆದಿದ್ದರೆ ಕಷ್ಟದಲ್ಲಿ ಒಳ್ಳೆಯದನ್ನೇ ಕಾಣುತ್ತೀರಿ. ಸದಾ ದೈವಚಿಂತನೆ ಇರಲಿ. ಶನಿಗಾಗಿ ಶನಿ ಪ್ರಾರ್ಥನೆ. ಗುರುವಿಗೆ ದತ್ತಾತ್ರೇಯ ಗುರು-ಚರಿತ್ರೆ ಪಾರಾಯಣ ಮಾಡಿ.

ತುಲಾ

ಚಿತ್ತ, ಸ್ವಾತಿ, ವಿಶಾಖ ನಕ್ಷತ್ರಗಳು ವೃಷಭಾಧಿಪತಿ ಶುಕ್ರನ ಕೈಯಲ್ಲಿದೆ. ಚತುರ್ಥದಲ್ಲಿ ಶನಿಯಿದ್ದರೂ, ಪಂಚಮದಲ್ಲಿ ಗುರುವಿರುವುದರಿಂದ ಸಮತೋಲನ ಜೀವನ ನಡೆದು ವಿದ್ಯಾಜ್ಞಾನವನ್ನು ಸರಿಯಾಗಿ ಉಪಯೋಗಿಸಿ ಹೇರಳವಾಗಿ ಧನ ಮಾಡಬಹುದು. ಸಂಪಾದನೆಗೆ ಅಡ್ಡದಾರಿ ಹಿಡಿದರೆ ಕೇತು ಗ್ರಹವು ಮುಂದೆ ಹೋಗಲು ಬಿಡುವುದಿಲ್ಲ. ದುಡ್ಡಿನಿಂದ ಸುಖ ಬರುತ್ತದೆ- ಚಾಮುಂಡಿ ಅಷ್ಟೋತ್ತರ ಪಾರಾಯಣ ಮಾಡಿ.

ವೃಶ್ಚಿಕ

ಮನುಷ್ಯನಿಗೆ ಬೇಕು ಬೇಡಗಳು ಬಹಳ. ಬೇಕಾದ ಪಟ್ಟಿ ದೊಡ್ಡದಿರುತ್ತದೆ. ನಿಮ್ಮ ವ್ಯಾಪಾರ ವಹಿವಾಟು ಮುಂದೆ ಸಾಗಿ ಹಾಕಿದ ಬಂಡವಾಳ ಲಾಭವಾಗಿ ಬಂದು ಸೇರಬೇಕು. ಸೆ.17ರ ಆಚೆಗೆ 2023ನೇ ಇಸವಿಯೂ ಚೆನ್ನಾಗಿರುತ್ತದೆ -ದೈವಬಲ-ಗುರುಬಲ ಇದ್ದರೆ ಮನುಷ್ಯನು ಏನನ್ನಾದರೂ ಗೆಲ್ಲಬಹುದು. ಕುಲಗುರುವನ್ನು ಕುಲದೇವರನ್ನು ವಂದಿಸಿ. ದತ್ತನ ಧ್ಯಾನ, ಪಾರಾಯಣ ಬೇಕೇ ಬೇಕು.

ಧನು

ನಿಮ್ಮ ಮನಸ್ಸಿನ ಮೇಲೆ ನೋವುಂಟಾಗುವುದನ್ನು ತಡೆಯಲು ರಾಮನ ಧ್ಯಾನ, ಅತ್ರಿಸುತ ದತ್ತನ ಪೂಜೆ, ಪಾರಾಯಣ ಮಾಡಿ. ವೇಗವಾಗಿ ಓಡಿ ಸುಸ್ತಾಗಬೇಡಿ. 2022ನೇ ಏಪ್ರಿಲ್ ಆಚೆಗೆ ಒಳ್ಳೆಯ ಸಮಯ ಬರಲಿದೆ. ಸಂಯಮದಿಂದ ಇದ್ದರೆ ಒಳ್ಳೆಯ ಭಾಗ್ಯವನ್ನು ಅನುಭವಿಸುತ್ತೀರಿ. ಮಾತು ಮುತ್ತಿನಂತಿರಬೇಕು. ಆದರೆ ಹತೋಟಿಯಲ್ಲಿರಲಿ.

ಮಕರ

ಮನುಷ್ಯನಿಗೆ ಮನಸ್ಸು ಎಷ್ಟು ಮುಖ್ಯವೋ ಪಂಚೇಂದ್ರಿಯಗಳು ಕೂಡ ಅಷ್ಟೇ ಮುಖ್ಯ. ನಿಲ್ಲಲು ಶಕ್ತಿ, ನಾಲಿಗೆಯಿಂದ ಮೃದುವಾದ ಮಾತುಗಳು, ಕಣ್ಣುಗಳು ಎಲ್ಲೆಲ್ಲೂ ದೇವರನ್ನೇ ಕಾಣುವಂತಿರಬೇಕು. ದೇವರು ಭುಜದ ಮೇಲಿಡುವ ಪೆಟ್ಟಿಗೆ ಮಿದುಳು ಸಕ್ರಿಯವಾಗಿರಬೇಕು. ಆಲೋಚಿಸಿ ಮುನ್ನುಗ್ಗಿ. ಕಾಪಾಡುವವನು ದೈವನೊಬ್ಬನೇ. ಹಲವು ನಾಮಗಳಿಂದ ಪೂಜಿಸಿ. ಮಹಾವಿಷ್ಣು ಅಷ್ಟೋತ್ತರ ಪಾರಾಯಣ ಮಾಡಿ.

ಕುಂಭ

ಕಂಭಕ್ಕೂ-ಕಂಬಕ್ಕೂ ನಂಟಿದೆ. ಕುಂಭವನ್ನು ಎಲ್ಲಿಬೇಕಾದರೂ ಇಡಬಹುದು. ಆದರೆ ಜಾರದಂತೆ ನೋಡಿಕೊಳ್ಳಬೇಕು. ಆದರೆ ಕಂಬವನ್ನು ನಿರ್ಧಿಷ್ಟ ಸ್ಥಳದಲ್ಲೇ ಇರಿಸಬೇಕು. ಲಗ್ನದಲ್ಲಿ ಗುರುವಿದ್ದು ಈ ಶನಿ ಸಂಚಾರದಲ್ಲಿ ಗುರುವೇ ನಿಮ್ಮನ್ನು ನೋಡಿಕೊಳ್ಳುತ್ತಾನೆ. ಶನಿಯ ಅಷ್ಟೋತ್ತರ ಪಾರಾಯಣ ಮಾಡಿ.

ಮೀನ

ಕುಂಭದಲ್ಲಿ ವಕ್ರೀಗುರು, ಶ್ರಾವಣದಲ್ಲಿ ಏಕಾದಶದಲ್ಲಿ ಶನಿಯು ಸಂಚರಿಸಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ತಾಳ್ಮೆಯಿರಬೇಕು. ನುಡಿದಂತೆ ನಡೆಯಬೇಕು. ಪರಮಾತ್ಮನ ಅನುಸಂಧಾನದಲ್ಲಿ ದೇವರು ನಿಮ್ಮ ಜೀವನದಲ್ಲಿ ಕಷ್ಟ-ಕಾರ್ಪಣ್ಯ ಹೆಚ್ಚಾಗಿರುವುದಿಲ್ಲ. ಹರಿಹರರನ್ನು ಪೂಜಿಸಿ, ಯಾವ ಕಷ್ಟವೂ ಬರುವುದಿಲ್ಲ. ಅದರಲ್ಲೂ ಶಿವನ ದಾರಿದ್ರ್ಯಹನ ಸ್ತೋತ್ರ ಪಾರಾಯಣ ಮಾಡಿ.

Leave a Comment

Your email address will not be published. Required fields are marked *