Ad Widget .

ಮಧ್ಯರಾತ್ರಿ ಸಿಕ್ಕಿದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕಿದೆ – ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಸಿಎಂ ಬೊಮ್ಮಾಯಿ ಕರೆ

Ad Widget . Ad Widget .

ಬೆಂಗಳೂರು : ‘ದೇಶಕ್ಕೆ ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕು. ಅಂತಹ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ’ ಎಂದು ನಾಡಿನ ಜನತೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

Ad Widget . Ad Widget .

1947 ರಲ್ಲಿ ಬಂದ ಸ್ವಾತಂತ್ರ್ಯ ಸಾತ್ವಿಕ ಹೋರಾಟದಿಂದ ಬಂದಿದೆ. ನಾವೆಲ್ಲ 75 ವರ್ಷ ಪೂರೈಸಿದ್ದೇವೆ, ಸಿಕ್ಕಿದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಜನತೆ ಚಿಂತಿಸಬೇಕು ಎಂದವರು ತಿಳಿಸಿದರು.

ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಮುನ್ನಡೆಯಬೇಕಾಗಿದೆ. ಅಮೃತ ಮಹೋತ್ಸವವನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕರೆ ನೀಡಿದರು. ಸ್ವಾತಂರ್ತ್ಯ ದಿವಸವನ್ನು ಅರ್ಥಪೂರ್ಣವಾಗಿ ಹಾಗೂ ಬಹಳ ವಿಭಿನ್ನವಾಗಿ ಆಚರಿಸಬೇಕೆಂದು ಅಂದುಕೊಂಡಿದ್ದೆವು, ಆದರೆ ಕೊರೊನಾ ಹಿನ್ನೆಲೆ ಕಾರ್ಯಕ್ರಮ ಮೊಟಕುಗೊಳಿದ್ದೇವೆ, ನಾವೆಲ್ಲಾ 75 ವರ್ಷದ ಹಿಂದಿನ ದಿನಗಳನ್ನು ನೋಡಬೇಕಾಗಿದೆ, ಮುಂದಿನ ಕರ್ನಾಟಕ ಕಲ್ಪನೆ ಬಿತ್ತಬೇಕಾಗಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *