Ad Widget .

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ…

Ad Widget . Ad Widget .

ನವದೆಹಲಿ: ಅಫ್ಘಾನಿಸ್ತಾನದ ಯುವಕ ಹಾಗೂ ಫ್ರಾನ್ಸ್​ನ ಯುವತಿ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್​ನಿಂದ ಇವರ ಲವ್​ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ.

Ad Widget . Ad Widget .

ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಇಬ್ಬರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ದೆಹಲಿಯ ಮಸೀದಿಯೊಂದರಲ್ಲಿ ವಿವಾಹವಾಗಿದ್ದರು.

ಆದರ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದು, ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನೂತನ ಜೋಡಿ ಫ್ರಾನ್ಸ್​ಗೆ ಹೋಗಲು ಬಯಸಿದರು.
ಆದರೆ ಅಫ್ಘಾನಿಸ್ತಾನ ಮೂಲದ ಪತ್ನಿಯ ವೀಸಾಕ್ಕಾಗಿ ಫ್ರೆಂಚ್​​ ರಾಯಭಾರ ಕಚೇರಿಗೆ ತೆರಳಿದಾಗ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡದೇ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮದುವೆಯಾಗಿರುವ ಕಾರಣ, ಈ ಜೋಡಿ ವಿವಾಹ ನೋಂದಣಿಗಾಗಿ ದೆಹಲಿ ಸರ್ಕಾರದ ವೆಬ್​ಸೈಟ್​​ಗೆ ಮೊರೆ ಹೋಗಿದ್ದಾರೆ. ಅಲ್ಲೂ ಅದೃಷ್ಟ ಕೈಗೂಡಲಿಲ್ಲ. ಏಕೆಂದರೆ ಕಡ್ಡಾಯವಾಗಿ ಆಧಾರ್​ ಕಾರ್ಡ್​​ ಮತ್ತು ವೋಟಿಂಗ್ ಕಾರ್ಡ್ ಬೇಕು ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಆದ್ದರಿಂದ ಜೋಡಿ ದೆಹಲಿಯ ಪ್ರಸಿದ್ಧ ವಕೀಲ ದಿವ್ಯಾಂಶು ಪಾಂಡೆ ಎಂಬ ವಕೀಲರನ್ನು ಭೇಟಿಯಾದರು.

ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಸಲಹೆ ನೀಡಿದರು. ನಂತರ ಅರ್ಜಿ ಸಲ್ಲಿಸಿದ ಅವರು ಸಂವಿಧಾನದ 14ನೇ ಪರಿಚ್ಛೇದ ಉಲ್ಲೇಖ ಮಾಡಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವಂತೆ ಕೋರಿದ್ದಾರೆ. ವಾದ ಆಲಿಸಿದ ಹೈಕೋರ್ಟ್​ ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡುವ ಮೂಲಕ ಪ್ರತಿಕ್ರಿಯೆ ಕೇಳಿದೆ. ಇದಕ್ಕೆ ದೆಹಲಿ ಸರ್ಕಾರ ಸಮ್ಮಿತಿ ನೀಡಿದೆ. ಆದ್ದರಿಂದ ಇಬ್ಬರಿಗೂ ವಿಶೇಷ ವಿವಾಹ ಕಾಯ್ದೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಜೋಡಿಯ ಕಥೆ ಸುಖಾಂತ್ಯಗೊಂಡಿದ್ದು, ಮುಂದಿನ ತಿಂಗಳು ಇವರು ಫ್ರಾನ್ಸ್​ಗೆ ತೆರಳಲಿದ್ದಾರೆ.
ಒಟ್ಟಾರೆ ಎರಡು ಧ್ರುವಗಳ ಪ್ರೀತಿಗೆ ಭಾರತ ನೆಲ ಸಾಕ್ಷಿಯಾಯಿತು. ಈ ಜೋಡಿಯ ಮುಂದಿನ ಬಾಳು ಸುಖವಾಗಿರಲಿ ಎಂದು ಹಾರೈಸೋಣ….

Leave a Comment

Your email address will not be published. Required fields are marked *