ತಾಲಿಬಾನಿ‌ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು

Ad Widget ... ..

ಮಂಗಳೂರು: ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿ ಪಡಿಸಿರುವುದು ತಾಲಿಬಾನಿ‌ ಸಂಸ್ಕ್ರತಿಯನ್ನು ತೋರ್ಪಡಿಸುತ್ತದೆ. ಸೌಹಾರ್ದಯುತವಾಗಿದ್ದ ಕರಾವಳಿಯಲ್ಲಿ ಇಂತಹ ವಿಚಾರಗಳು ಶೋಭೆ ತರದು. ಇಂತವುಗಳು ರಾಜ್ಯದಲ್ಲಿ ‌ನಡೆಯಲ್ಲ’ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ.

Ad Widget

ಪುತ್ತೂರಿನ ಕಬಕದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ರಥಯಾತ್ರೆಗೆ ಇಂದು ಮುಂಜಾನೆ ಎಸ್ ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ರಥಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಿದ್ದಕ್ಕೆ ಅಡ್ಡಿ ಪಡಿಸಿದ್ದ ಕಾರ್ಯಕರ್ತರು ಟಿಪ್ಪುವಿನ ಫೋಟೋ ಕೂಡಾ ಹಾಕುವಂತೆ ದಾಂಧಲೆ ಎಬ್ಬಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಟ ‘ ಇಂತಹ ಘಟನೆಗಳು ಕರಾವಳಿ ನೆಮ್ಮದಿಯನ್ನು ಕಸಿಯುತ್ತವೆ. ಈ ಕುರಿತಂತೆ ರಾಜ್ಯ‌ ಗೃಹಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈ ನಡುವೆ ನಡೆದ ಬೆಳವಣಿಗೆಯಲ್ಲಿ ಸ್ವಾತಂತ್ರ್ಯ ಸ್ವರಾಜ್ಯ ರಥ ಅಡ್ಡಿ ಪಡಿಸಿ ದೇಶದ್ರೋಹದ ಕೃತ್ಯ ಮಾಡಿರುವುದು ಕಬಕ ಗ್ರಾ.ಪಂ ನೀಡಿದ ದೂರಿನಂತೆ ಮೂವರು ಸಮಸ್ಯೆಗಳನ್ನು ಬಳಸಿಕೊಂಡು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಕೆ ಅಜೀಜ್ , ಶಮೀರ್, ಅಬ್ದುಲ್ ರೆಹಮಾನ್ ಎಂಬ ಮೂವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಏಳು ಮಂದಿಯ ಮೇಲೆ ಕೇಸ್ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *