ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದ್ದು, ರಾಜಧಾನಿ ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶ ಪಡೆದು ಸಂಪೂರ್ಣ ನಗರವನ್ನು ಇಂದು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಫ್ಘನ್ ಸರ್ಕಾರ ತಾಲಿಬಾನ್ ಶರಣಾಗಿದೆ.
ಹಲವು ದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಇದೀಗ ತಾಲಿಬಾನಿಗಳು ರಾಜಧಾನಿ ಕಾಬೂಲ್‍ಗೆ ಪ್ರವೇಶಪಡೆದು ಆಫ್ಘನ್ ಸರ್ಕಾರದಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡಿದೆ. ಶಾಂತಿಯುತವಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸಂಪೂರ್ಣ ಆಫ್ಘಾನಿಸ್ತಾನವನ್ನು 7 ದಿನಗಳಲ್ಲಿ ವಶಪಡಿಸಿಕೊಳ್ಳುತ್ತೇವೆ ಎಂದು ತಾಲಿಬಾನಿಗಳು ಘೋಷಿಸಿದ ಬೆನ್ನಲ್ಲೇ ದಾಳಿ ತೀವ್ರಗೊಂಡು ಕಾಬೂಲ್‍ನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶಿಸುತ್ತಿದ್ದಂತೆ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಏರ್ಲಿಫ್ಟ್ ಮೂಲಕ ಸ್ಥಾಳಾಂತರಿಸಿತು. ಅಫ್ಘನ್ ಭದ್ರತಾ ಪಡೆಗಳು ಮತ್ತು ಅಂತಾರಾಷ್ಟ್ರೀಯ ಮಿತ್ರಪಡೆಯ ಸೈನಿಕರು ತಾಲಿಬಾನಿಗಳ ವಿರುದ್ಧ ಹೋರಾಡಿ ರಾಜಧಾನಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದರು ಅದು ವಿಫಲಗೊಂಡಿದೆ.