ಸಮೋಸವನ್ನು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯದ ಹಿತದೈಷ್ಟಿಯಿಂದ ಒಳ್ಳೆಯದು. ಇಲ್ಲಿದೆ ಸುಲಭವಾಗಿ ಮಾಡುವ ದಹಿ ಸಮೋಸ ಚಾಟ್ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಮೈದಾ – 1 ಕಪ್
ಸೋಂಪು – ಅರ್ಧ ಚಮಚ
ಆಲೂಗಡ್ಡೆ – 3 (ಬೇಯಿಸಿ ಸಿಪ್ಪೆ ಸುಲಿದು ಮ್ಯಾಶ್ ಮಾಡಿರಬೇಕು)
ಕೊತ್ತಂಬರಿ ಪುಡಿ – 1/2 ಚಮಚ
ಹುರಿದ ಜೀರಿಗೆ – ಅರ್ಧ ಚಮಚ
ಎಣ್ಣೆ – 1 ಕಪ್
ಚಾಟ್ ಮಸಾಲ – ಅರ್ಧ ಚಮಚ
ಗಟ್ಟಿ ಮೊಸರು – ಮೂರುವರೆ ಕಪ್
ಬೆಣ್ಣೆ – ಒಂದೂವರೆ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಖಾರದ ಪುಡಿ ರುಚಿಗೆ ತಕ್ಕಷ್ಟು
ಈರುಳ್ಳಿ – 2
ಜೀರಿಗೆ – ಅರ್ಧ ಚಮಚ
ಬ್ಲ್ಯಾಕ್ ಸಾಲ್ಟ್ – ಚಿಟಿಕೆಯಷ್ಟು
ಸೇವ್ ಸ್ವಲ್ಪ
ಹುಣಸೆ ಹಣ್ಣಿನ ರಸ ಸ್ವಲ್ಪ
ಮಾಡುವ ವಿಧಾನ
ಮೈದಾವನ್ನು ಕಲೆಸಿ 15-20 ನಿಮಿಷ ಬಿಡಬೇಕು.
ಮೈದಾ ಜೊತೆಗೆ ಉಪ್ಪು, ಬೆಣ್ಣೆ, ಸೋಂಪು ಹಾಕಿ ಸ್ವಲ್ಪ ನೀರು ಹಾಕಿ ಕಲಸಿ. ಮಿಶ್ರಣ ತುಂಬಾ ನೀರು-ನೀರಾಗದಿರಲಿ. ನಂತರ ಸಮೋಸದೊಳಗೆ ತುಂಬುವುದಕ್ಕೆ ಮಿಶ್ರಣ ತಯಾರಿಸಿ ಕೊಳ್ಳಬೇಕು. ಮೊದಲಿಗೆ ಪ್ಯಾನ್ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಉಳಿದ ಮಸಾಲೆ ಪದಾರ್ಥಗಳನ್ನು ಹಾಕಿ. ನಂತರ ಮ್ಯಾಶ್ ಮಾಡಿದ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ. ತದನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಈಗ ಮೈದಾ ಹಿಟ್ಟಿನಿಂದ ಸ್ವಲ್ಪ ಹಿಟ್ಟು ತೆಗೆದು ವೃತ್ತಾಕಾರವಾಗಿ ತಟ್ಟಿ, ನಂತರ ಅದರೊಳಗೆ ಮಸಾಲೆ ತುಂಬಿ ಸಮೋಸದ ಶೇಪ್‌ಗೆ ತನ್ನಿ, ನಂತರ ಎಣ್ಣೆಯಲ್ಲಿ ಕರಿಯಿರಿ.
ದಹಿ ಸಮೋಸ ಚಾಟ್ ಮಾಡಲು ಮೊದಲು ಮೊಸರಿಗೆ ಖಾರದ ಪುಡಿ ಹಾಕಿ ಚೆನ್ನಾಗಿ ಕದಡಿ. ಈಗ ಫ್ರೈ ಮಾಡಿದ ಸಮೋಸವನ್ನು ಪ್ಲೇಟ್‌ಗೆ ಹಾಕಿ ಪೀಸ್ ಮಾಡಿ, ಅದರ ಮೇಲೆ ಮೊಸರಿನ ಮಿಶ್ರಣ ಸುರಿಯಿರಿ. ನಂತರ ಹುಣಸೆ ರಸ ಹಾಕಿ ಸೇವ್, ಚಾಟ್ ಮಸಾಲ, ಹುರಿದ ಜೀರಿಗೆ ಪುಡಿ ಉದುರಿಸಿ. ಇದೀಗ ದಹಿ ಸಮೋಸ ಚಾಟ್ ರೆಡಿ ಟು ಈಟ್.