Ad Widget .

ನಾಗರ ಪಂಚಮಿ ವಿಶೇಷ ಖಾದ್ಯ – ಸಿಹಿಯಾದ ಅರಶಿನ ಎಲೆ ಕಡುಬು

Ad Widget . Ad Widget .

ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಹಬ್ಬಗಳಂದು ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯವನ್ನು ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್‌ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ.

Ad Widget . Ad Widget .

ಅರಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಸಂತೋಷವೇ ಬೇರೆ.

ಬೇಕಾಗುವ ಸಾಮಾಗ್ರಿಗಳು:

ದೋಸೆ ಅಕ್ಕಿ- 2 ಲೋಟ, (ಇದಕ್ಕೆ ಮಂಗಳೂರು ರೈಸ್‌ ಅಥವಾ ಕುಚ್ಚಿಲಕ್ಕಿಯನ್ನು ಬಳಸಿದರೂ ಚೆನ್ನಾಗಿರುತ್ತೆ. ಬಣ್ಣ ಕೊಂಚ ಬೇರೆ ಥರ ಇದ್ದರೂ ರುಚಿ ಅದ್ಭುತವಾಗಿರುತ್ತದೆ. ಬೆಲ್ಲ – 1 ಲೋಟ, ಹಸಿ ತೆಂಗಿನಕಾಯಿ ತುರಿ – 1 ಲೋಟ, ಹತ್ತಾರು ಅರಶಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು – ಸ್ವಲ್ಪ

ಮಾಡುವ ವಿಧಾನ:

ಮೊದಲು ಅಕ್ಕಿ ನೆನೆಸಬೇಕು. ಹಿಂದಿನ ದಿನ ರಾತ್ರಿ ಅಕ್ಕಿ ನೆನೆಹಾಕಿದರೆ ಒಳ್ಳೆಯದು. ದೋಸೆ ಅಕ್ಕಿಯಾದರೆ ಮೂರು ಗಂಟೆ ನೆನೆದರೂ ಸಾಕು. ಆದರೆ ಮಂಗಳೂರು ರೈಸ್‌ನಲ್ಲಿ ಈ ತಿಂಡಿ ತಯಾರಿಸೋದಾದರೆ ಹಿಂದಿನ ರಾತ್ರಿ ನೆನೆಸಿಡೋದು ಕಂಪಲ್ಸರಿ. ನೆನೆಸಿಟ್ಟ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಉಪ್ಪು ಹಾಕಿ ಮತ್ತೊಮ್ಮೆ ರುಬ್ಬಿ. ಇದಕ್ಕೆ ಹೆಚ್ಚು ನೀರು ಹಾಕಬಾರದು. ಆದರೆ ನುಣ್ಣಗೆ ರುಬ್ಬಬೇಕು. ಈಗ ಬೌಲ್‌ನಲ್ಲಿ ತೆಗೆದಿಟ್ಟ ಬೆಲ್ಲವನ್ನು ಹಾಕಿ. ಬೆಲ್ಲದ ಪುಡಿ ಇದ್ದರೆ ಒಳ್ಳೆಯದು. ಇಲ್ಲವಾದರೆ ಬೆಲ್ಲ ತುರಿದು ಹಾಕಿದರೂ ನಡೆಯುತ್ತೆ. ಹೀಗೆ ತುರಿದ ಬೆಲ್ಲಕ್ಕೆ ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸವರಿ. ದಪ್ಪವಾಗಿ ಬೇಡ ತೆಳ್ಳಗೆ ಹಾಕಬೇಕು. ಇದರ ಮೇಲೆ ಬೆಲ್ಲ, ಕಾಯಿತುರಿಯ ಮಿಶ್ರಣವನ್ನು ಹಾಕಿ ಎಲೆಯನ್ನು ಮಡಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಬಾಯಲ್ಲಿ ನೀರೂರುವ ರುಚಿಯಾದ ಅರಶಿನ ಎಲೆ ಕಡುಬು ರೆಡಿ.

Leave a Comment

Your email address will not be published. Required fields are marked *