ಮಂಗಳೂರು: ಅಪರಿಚಿತ ಮಹಿಳೆಯರು ಮಾರ್ಕೆಂಟಿಂಗ್ ನೆಪದಲ್ಲಿ ಮನೆ -ಮನೆಗಳಿಗೆ ಭೇಟಿ ನೀಡಿದ್ದು ಮನೆಯಲ್ಲಿ ವಾಸಿಸುತ್ತಿರುವ ಮಕ್ಕಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಇದರಿಂದ ಪೋಷಕರು ಭಯಭೀತರಾದ ಘಟನೆ ನಗರದ ಕುಳೂರಿನ ರಾಯಕಟ್ಟೆ ಪ್ರದೇಶದಲ್ಲಿ ನಡೆದಿದೆ.
ಈ ನಾಲ್ವರು ಅಪರಿಚಿತ ಮಹಿಳೆಯರು ಮಕ್ಕಳಿಗೆ ಪ್ರೋಟೀನ್ ಪುಡಿಯನ್ನು ಉತ್ಪಾದಿಸುವ ಕಂಪನಿಯ ಹೆಸರು ಹೇಳಿ ಮಾರ್ಕೆಟಿಂಗ್ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಮನೆಗಳಲ್ಲಿ ಇದ್ದ ಮಕ್ಕಳ ಫೋಟೋಗಳನ್ನು ಚಿತ್ರೀಕರಿಸಿದ್ದಾರೆ. ಮಾತ್ರವಲ್ಲದೆ ಅವರು ಒತ್ತಾಯಿಸಿ ನಮ್ಮಿಂದ ಬಲವಂತವಾಗಿ ಮಾಹಿತಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ .
ಮನೆಮನೆಗೆ ಬಂದು ಮನೆಯಲ್ಲಿರುವವರ ಮಾಹಿತಿ ಕಲೆ ಹಾಕಿ ಕಳವು ದರೋಡೆ ಮುಂತಾದ ದುಷ್ಕೃತ್ಯ ಮಾಡುವ ಇದ್ದು ಸಾರ್ವಜನಿಕರು ಅಂಥವರ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಮತ್ತು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಬೇಕು.