Ad Widget .

‘ನಿಮಗೇನು ಕಾಮನ್ ಸೆನ್ಸ್ ಇಲ್ವಾ?’ ದ.ಕ ಡಿಸಿ ಗೆ ಸಿಎಂ ಹಿಗ್ಗಾಮುಗ್ಗಾ ತರಾಟೆ

Ad Widget . Ad Widget .

ಮಂಗಳೂರು: ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ?ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡೋಕೆ ನಿಮ್ಮಿಂದ ಆಗಲ್ವಾ? ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

Ad Widget . Ad Widget .

ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತರು ಸೇರಿದಂತೆ ಅರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ ಕೊರತೆ ಇದೆ ಎಂದು ಶಾಸಕ ಯು.ಟಿ. ಖಾದರ್ ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಪಿಪಿಇ ಕಿಟ್ ಸಾಕಷ್ಟು ಲಭ್ಯ ಇದೆ. ಗ್ಲೌಸ್ ಮತ್ತು ಎನ್95 ಮಾಸ್ಕ್ ಕೊರತೆ ಇದ್ದು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದರು
ಇದಕ್ಕೆ ಗರಂ ಆದ ಮುಖ್ಯಮಂತ್ರಿ, ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ? ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ? ಎಂದು ಪ್ರಶ್ನಿಸಿದ ಸಿಎಂ,ಎಸ್ ಡಿಆರ್ ಎಫ್ ಫಂಡ್ ಅದು, ಇದು ಪಡೆದು ಇವತ್ತೇ ಖರೀದಿ ಮಾಡಿ. ಬೆಂಗಳೂರು ಬಿಟ್ಟು ಎಲ್ಲವನ್ನೂ ಇಲ್ಲೇ ಖರೀದಿಸಿ. ಸಂಜೆ ನನಗೆ ರಿಪೋರ್ಟ್ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರನ್ನು ಕೂಡ ಸಿಎಂ ಬೆಂಡೆತ್ತಿದರು.

ಏನಯ್ಯ, ನೀನ್ ಏನ್ ಮಾಡ್ತಾ ಇದೀಯ ಇಲ್ಲಿ ಅಂತ ಹೇಳು. ನಿನ್ನತ್ರ ಏನು ಸಮಸ್ಯೆ ಇದೆ ಅಂತ ಡಿಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ? ಮೋಸ್ಟ್ ಸೀನಿಯರ್ ಹೆಲ್ತ್ ಆಫೀಸರ್ ಆಗಿದ್ರೂ ನೀನ್ ಏನ್ ನಿದ್ದೆ ಮಾಡ್ತಾ ಇದೀಯಾ? ಮಾಸ್ಕ್, ಗ್ಲೌಸ್ ಎಷ್ಟು ಕೊರತೆ ಇದೆ ಅನ್ನೋದು ಲೆಕ್ಕ ಇಡೋಕೆ ಆಗಲ್ವಾ ನಿಂಗೆ. ನಿಮ್ಮ ಯಾವುದೇ ಸಮರ್ಥನೆ ನಂಗೆ ಬೇಡ, ಸಂಜೆಯೊಳಗೆ ನಂಗೆ ರಿಪೋರ್ಟ್ ಕೊಡಿ ಎಂದು ಮುಖ್ಯಮಂತ್ರಿ ಗರಂ ಆದರು.

Leave a Comment

Your email address will not be published. Required fields are marked *