ನವದೆಹಲಿ: ರಾಜ್ಯದ ರೈತರು ಹನಿ ನೀರಾವರಿಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ 300 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಆ.11ರಂದು ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶೋಭಾ ಕರಂದ್ಲಾಜೆ, ಈ 300 ಕೋಟಿ ಅನುದಾನದಲ್ಲಿ 21 ಕೋಟಿ ಅನುದಾನವನ್ನು ಬುಡಕಟ್ಟು ಪ್ರದೇಶದ ಉಪ ಯೋಜನೆ, 51 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ವರ್ಗಕ್ಕೆ ವಿಶೇಷ ಘಟಕ ಯೋಜನೆ ಮತ್ತು ಸಾಮಾನ್ಯ ವರ್ಗ (ಜನರಲ್ ಕೆಟಗರಿ) ಅಡಿಯಲ್ಲಿ 228 ಕೋಟಿ ರೂ. ಅನುದಾನವನ್ನು ವಿಂಗಡಿಸಿ ಹಂಚಿಕೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.