Ad Widget .

‘ಹೊಡೆದಾಟಕ್ಕೆ ರೆಡಿ ಅಂದ್ರೆ ಅದರರ್ಥ ಏನು ಈಶ್ವರಪ್ಪನವ್ರೇ?’ – ಬೇಳೂರು ಕಿಡಿ

Ad Widget . Ad Widget .

ಶಿವಮೊಗ್ಗ : ಜನರ ಆಚಾರ -ವಿಚಾರ ಬಗ್ಗೆ ಮಾತನಾಡುವ ಈಶ್ವರಪ್ಪನವರು ನಾವು ಹೊಡೆದಾಟಕ್ಕೆ ರೆಡಿ ಇದ್ದೇವೆ ಅಂದ್ರೆ ನೀವು ಜನರಿಗೆ ಏನು ಸಂದೇಶ ಕೊಡ್ತೀರಾ ? ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರು ಈಶ್ವರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.

Ad Widget . Ad Widget .

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ತತ್ವ, ಸಿದ್ದಾಂತ, ಭಾರತ ಮಾತೆ ಎಂದು ಬಿಜೆಪಿಯ ಬಗ್ಗೆ ಈಶ್ವರಪ್ಪ ಮಾತನಾಡುತ್ತಾರೆ. ಅದರ ಜೊತೆಗೆ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಗೌರವ ಇರುವ ಹಿರಿಯ ನಾಯಕರು ಹೀಗೆ ಮಾತನಾಡಬಾರದು. ಇದು ನಿಮಗೆ ಶೋಭೆ ತರಲ್ಲ ಎಂದರು.

‘ಮೊನ್ನೆಯಷ್ಟೆ ನಾವು ಬಲಿಷ್ಟರಾಗಿದ್ದೇವೆ ಮುಟ್ಟಿದರೆ ಎರಡು ಹೊಡೆಯುತ್ತೇವೆ ಎಂದಿದ್ದ ಈಶ್ವರಪ್ಪನವರು ನಿನ್ನೆ ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎನ್ನುವ ನೀವು ಈಗ ಹೀಗೆಲ್ಲಾ ಮಾತನಾಡುತ್ತಿದ್ದೀರಿ‌. ಸಾರ್ವಜನಿಕ ಬದುಕಿನಲ್ಲಿ ಹೇಗೆ ಇರ್ತಾರೋ ತಿಳಿಯುತ್ತಿಲ್ಲ ಕೆಟ್ಟ ವರ್ತನೆಯಿಂದ ನಿಮ್ಮ ಬಿಜೆಪಿಗೆ ಖಂಡಿತಾ ಲಾಭ ಅಗಲ್ಲಾ’ ಎಂದು ಹೇಳಿದರು.

Leave a Comment

Your email address will not be published. Required fields are marked *