Ad Widget .

ಸಿಎಂ ಬೊಮ್ಮಾಯಿ ಮತ್ತೊಂದು ಮಹತ್ವದ ಹೆಜ್ಜೆ ಶುಭಕೋರುವ ಬೋರ್ಡಿಂಗ್ಸ್ ಫ್ಲೆಕ್ಸ್ ಗೆ ಬ್ರೇಕ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉಡುಪಿ: ಕೆಲವು ದಿನಗಳ ಹಿಂದೆ ಸರಕಾರಿ ಸಮಾರಂಭಗಳಲ್ಲಿ ಹೂ ಗುಚ್ಛ, ಹಾರ, ಇತರ ನೆನಪಿನ ಕಾಣಿಕೆ ನೀಡುವುದನ್ನು ನಿಷೇಧಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

Ad Widget . Ad Widget . Ad Widget .

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ
ಶುಭಕೋರುವಂತಹ ವರ್ಡಿಂಗ್ಸ್ ಫ್ಲೆಕ್ಸ್ ಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದರು. ಜೊತೆಗೆ ಫ್ಲೆಕ್ಸ್ ಗಳನ್ನು ಹಾಕದಂತೆ ಪಕ್ಷ ಮತ್ತು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡರು.
ಸರಕಾರಿ ಸಮಾರಂಭಗಳಲ್ಲಿ ಹೂವಿನ ಬಳಕೆ ನಿಷೇಧ ಮಾಡಿರುವುದನ್ನು ವಿರೋಧಿಸಿ ಹೂವಿನ ವ್ಯಾಪ್ಯಾರಿಗಳು ಕೈಗೊಂಡಿದ್ದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡುವ ಇಚ್ಚೆ ನಮಗಿಲ್ಲ. ಸರಕಾರಿ ಕಾರ್ಯಕ್ರಮಗಳಲ್ಲಿ ಹೂವು, ಹೂವಿನ ಗುಚ್ಚಗಳನ್ನು ಬಳಕೆಮಾಡುವುದನ್ನು ನಿಷೇಧಿಸಲಾಗಿದೆಯೇ ಹೊರತು ಖಾಸಗಿ ಕಾರ್ಯಕ್ರಮಗಳಲ್ಲಿ ಅಲ್ಲ. ಹೂವಿನ ವ್ಯಾಪಾರಿಗಳು ಖಾಸಗಿ ಕಾರ್ಯಕ್ರಮಗಳಿಗೆ ಹೂವಿನ ಬಳಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಸೋಂಕಿನಿಂದ ಒಂದು ಲಕ್ಷಗಳಷ್ಟು ಮಂದಿ ಸಾವನ್ನಪ್ಪಿದ್ದರೂ ಸರಕಾರ ಇದನ್ನು ಮುಚ್ಚಿ ಇಟ್ಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆ ಗೆ ಪ್ರತಿಕ್ರಿಯೆ ನೀಡಿದ ಅವರು ಇದು ಆಧಾರರಹಿತವಾದ ಹೇಳಿಕೆ, ರಾಜ್ಯದ ಜಿಲ್ಲೆಗಳಲ್ಲಿ ಎಲ್ಲಾ ಬಗೆಯ ದಾಖಲೆಗಳಿವೆ. ಅವರ ಹೇಳಿಕೆಗೆ ಕುರಿತಾಗಿ ಆಧಾರ ಇದ್ದರೆ ನೀಡಲಿ, ಈ ಬಗ್ಗೆ ಪರಿಶೀಲನೆ ನಡೆಸೋಣ ಎಂದಿದ್ದಾರೆ.

ಪೊಲೀಸ್ ಗೌರವಾರ್ಪಣೆಗಳ ಕಾರ್ಯಕ್ರಮಗಳನ್ನು ಖಾಸಗಿ ಜಾಗದಲ್ಲಿ ನಡೆಸುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದ ಅವರು, ಗೌರವಾರ್ಪಣೆಯನ್ನು ಪ್ರತೀ ಬಾರೀ ನಡೆಸುವ ಅಗತ್ಯವಿಲ್ಲ. ಇವುಗಳನ್ನು ವಿಶೇಷ ಪೊಲೀಸ್ ಸಮಾರಂಭದ ಸಂದರ್ಭದಲ್ಲಿ ಮಾತ್ರ ನಡೆಸುವಂತಾಗಬೇಕು. ಈ ಬಗ್ಗೆ ತಕ್ಷಣ ಆದೇಶ ನೀಡುವುದಾಗಿ ತಿಳಿದರು.

ಮುಖ್ಯಮಂತ್ರಿ ಆದರೂ ನಾಡಿನ ಸೇವಕ ಎಂಬ ಭಾವನೆ ಕಡಿಮೆ ಆಗಬಾರದು ಎಂದ ಅವರು ಎತ್ತಿನ ಹೊಳೆ ಯೋಜನೆ ಬಗ್ಗೆ ಕೇಳಿದ ಪ್ರಶ್ನೆ ಗೆ ಪ್ರತಿಕ್ರಿಯೆ ನೀಡಿ, ಎತ್ತಿನ ಹೊಳೆ ಯೋಜನೆಯನ್ನು ಅಪ್ಪರ್ ಭದ್ರ ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿದ್ದೆ. ದೆಹಲಿಯಲ್ಲಿ ಜಲಶಕ್ತಿ ಮಂತ್ರಿಯನ್ನು ಭೇಟಿಯಾಗಿದ್ದು, ಸಿಡ್ಲ್ಯೂ ಸಿ ಯಲ್ಲಿ ಎಲ್ಲಾ ಸ್ಪಷ್ಟವಾಗಿದೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ಸಿಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *