Ad Widget .

ಮಾಜಿ ಶಾಸಕ ಬಿ.ಎಂ. ಇದಿನಬ್ಬರ ಪುತ್ರನ ಮನೆಗೆ ಐಸಿಸ್ ನಂಟು ಆರೋಪ: ಬಜರಂಗದಳದ ಕಾರ್ಯಕರ್ತರಿಂದ ಮನೆಗೆ ಮುತ್ತಿಗೆ- 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

Ad Widget . Ad Widget .

Ad Widget . Ad Widget .

ವಿಡಿಯೋ ವರದಿ

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಐಸಿಸ್ ನಂಟು ಆರೋಪದ ಹಿನ್ನಲೆ ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತರು ಆರೋಪಿತರ ಮನೆಗೆ ಮುತ್ತಿಗೆ ಹಾಕಿದ್ದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುರ್ರಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ. ಮನೆಯ ಗೇಟ್ ವರೆಗೆ ತೆರಳಿದ ಬಜರಂಗದಳದ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದಲ್ಲಿ ನಡೆದ NIA ದಾಳಿಯ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಉಳ್ಳಾಲ ತಾಲೂಕಿನ ಸುಮಾರು 26 ಪ್ರಮುಖ ಸ್ಥಳಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಇಂದು ಏಕ ಕಾಲದಲ್ಲಿ ದೇಶದ್ರೋಹಿ ಜಿಹಾದಿ ಉಗ್ರರ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಅಭಿಯಾನ ನಡೆಸಲಾಗಿತ್ತು. ಇದೇ ವೇಳೆ ಎನ್ಐಎ ದಾಳಿ ನಡೆಸಿದ್ದ ಮನೆಗೆ ಬಜರಂಗದಳ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

Leave a Comment

Your email address will not be published. Required fields are marked *