ನವದೆಹಲಿ : ರಾಜ್ಯಗಳು ತಮ್ಮ ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಪಟ್ಟಿಯನ್ನ ಮಾಡುವ ಹಕ್ಕನ್ನು ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನ ಮಂಗಳವಾರ ಲೋಕಸಭೆಯು ಅಂಗೀಕರಿಸಿದೆ. ವಿಶೇಷ ಅಂದ್ರೆ, ಇಡೀ ಸದನವು ಅದರ ಪರವಾಗಿ ಮತ ಚಲಾಯಿಸಿತು. ಲೋಕಸಭೆಯಲ್ಲಿ ಎಲ್ಲ ಸಾಧಕ ಬಾಧಕಗಳನ್ನ ಬೆಂಬಲಿಸಿ ಮತ ಚಲಾಯಿಸಲಾಯ್ತು.
ಲೋಕಸಭೆಯಲ್ಲಿ, ಸರ್ಕಾರವು ಸೋಮವಾರ ಇತರ ಹಿಂದುಳಿದ ವರ್ಗಗಳಿಗೆ (OBC) ಸಂಬಂಧಿಸಿದ ‘ಸಂವಿಧಾನ (127 ನೇ ತಿದ್ದುಪಡಿ) ಮಸೂದೆ, 2021’ ಅನ್ನು ಪರಿಚಯಿಸಿತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ರಾಜ್ಯ ಪಟ್ಟಿ/ಕೇಂದ್ರ ಪಟ್ಟಿಯನ್ನು ಹೊಂದಲು ಅನುವು ಮಾಡಿ ಕೊಡುತ್ತದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನ ಬಲ ಪಡಿಸುತ್ತದೆ.
ಪ್ರಾದೇಶಿಕ ಪಟ್ಟಿಯನ್ನ ತಯಾರಿಸಲು ರಾಜ್ಯಕ್ಕೆ ಅಧಿಕಾರ ನೀಡುತ್ತದೆ. ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ‘ಸಂವಿಧಾನ (127 ನೇ ತಿದ್ದುಪಡಿ) ಮಸೂದೆ, 2021’ ಅನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಅವರು ಕೆಳಮನೆಯಲ್ಲಿ ಮಂಡಿಸಿದರು.