Ad Widget .

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ

Ad Widget . Ad Widget .

ಬೆಳ್ತಂಗಡಿ: ಇಲ್ಲಿನ ಸುಲ್ಕೇರಿ ಗ್ರಾಮದಲ್ಲಿ ಆ.10 ರ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ.

Ad Widget . Ad Widget .

ಜಂತಿಗೂಳಿಯ ಪರಾರಿ ನಿವಾಸಿ ಸಂಜೀವ ಶೆಟ್ಟಿ ಅವರ ಪುತ್ರಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಸುಲ್ಕೇರಿ ಯ ತವರು ಮನೆಯಲ್ಲಿ ವಾಸವಿದ್ದರು.

ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಎಂದು ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ.

ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದರು. ಹುಡುಕಿದರೂ ಮಗುವಿನ ಸುಳಿವು ಪತ್ತೆಯಾಗಿಲ್ಲ
ಮನೆಯಿಂದ 100 ಮೀಟರ್ ಅಂತರದಲ್ಲಿ ಹೊಳೆಯೊಂದು ಹರಿಯುತ್ತಿದ್ದು ಮಗು ಆ ಕಡೆಗೆ ಏನಾದರೂ ಹೋಗಿರಬಹುದೆ ಎನ್ನುವ ಶಂಕೆ ಮೂಡಿತ್ತು.

ಈ ಹಿನ್ನಲೆಯಲ್ಲಿ ತಡರಾತ್ರಿವರೆಗೂ ಸ್ಥಳೀಯರು , ಆಗ್ನಿಶಾಮಕ ಪೊಲೀಸರು ಸ್ಥಳೀಯ ಪ್ರದೇಶ ಹಾಗೂ ಹೊಳೆಯಲ್ಲಿ ಶೋಧಿಸಿದರೂ ಮಗು ಪತ್ತೆಯಾಗಿಲ್ಲ. ಆದರೆ ಇಂದು ಮುಂಜಾನೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಳೆಯಲ್ಲಿ ಪತ್ತೆಯಾಗಿದೆ.

Leave a Comment

Your email address will not be published. Required fields are marked *