Ad Widget .

ಮತ್ತೆ ಅನಾವರಣಗೊಳ್ತು ರಜನಿ ಶೆಟ್ಟಿ ‌ಪ್ರಾಣಿಪ್ರೀತಿ| ಬಾವಿಗೆ ಬಿದ್ದ ಬೆಕ್ಕು ರಕ್ಷಣೆ

Ad Widget . Ad Widget .

ಮಂಗಳೂರು: ಕಾಸಿಯಾ ಹೈಸ್ಕೂಲ್ ಸಮೀಪ ಬೆಕ್ಕಿನ ಮರಿಯೊಂದು ಬಾವಿಗೆ ಬಿದ್ದಿದ್ದು, ಬಾವಿಗಿಳಿದು ಬೆಕ್ಕನ್ನು ರಕ್ಷಿಸುವ ಮೂಲಕ ರಜನಿ ಶೆಟ್ಟಿ ಮತ್ತೋಮ್ಮೆ ಸುದ್ದಿಯಾಗಿದ್ದಾರೆ.

Ad Widget . Ad Widget .

ಪತಿ ದಾಮೋದರ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ಬಂದ ರಜನಿ ಶೆಟ್ಟಿ ಹಗ್ಗದ ಮೂಲಕ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಲಾಕ್‍ಡೌನ್ ಇದ್ದ ಸಂದರ್ಭ ಬೃಹತ್ ಬಾವಿಗೆ ಬಿದ್ದಿದ್ದ ನಾಯಿಯನ್ನೂ ರಜನಿ ಶೆಟ್ಟಿ ಅವರು ರಕ್ಷಿಸಿದ್ದರು.

ರಜನಿ ಹಾಗೂ ಅವರ ಕುಟುಂಬದವರು ಕಳೆದ ಹಲವು ವರ್ಷಗಳಿಂದ ನೂರಾರು ನಾಯಿಗಳಿಗೆ ಆಹಾರ ಹಾಕುತ್ತಾರೆ. ಪ್ರತಿದಿನ 50 ಕೆ.ಜಿ ಅನ್ನವನ್ನು ನಾಯಿಗಳಿಗೆ ಉಣಬಡಿಸಲು ಬಳಸುತ್ತಾರೆ. ವಾಹನಕ್ಕೆ ಸಿಲುಕಿಯೋ ಅಥವಾ ಯಾವುದೇ ಕಾರಣದಿಂದ ಗಾಯಗೊಂಡ ನಾಯಿ, ಬೆಕ್ಕು, ಹಕ್ಕಿ ಇತ್ಯಾದಿಗಳನ್ನು ತಮ್ಮ ಮನೆಯಲ್ಲಿ ಸಾಕುತ್ತಿದ್ದಾರೆ.’

Leave a Comment

Your email address will not be published. Required fields are marked *