Ad Widget .

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ|

Ad Widget . Ad Widget .

ಹಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಘಳಿಗೆ 2028ರಲ್ಲಿ ಕೂಡಿಬರುತ್ತಿದ್ದು, 2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್​ನ್ನು ರಚನೆ ಮಾಡಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಭರ್ಜರಿಗೆ ಗುಡ್ ನ್ಯೂಸ್ ನೀಡಿದೆ..

Ad Widget . Ad Widget .

ಇನ್ನೂ 2028ರ ಲಾಸ್ ​ಏಂಜಲೀಸ್​ ಒಲಂಪಿಕ್ ​ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಹೇಳಿದ್ರು. ಈ ಮೊದಲು ಬಿಸಿಸಿಐ ಒಲಂಪಿಕ್​ನಲ್ಲಿ ಸೇರ್ಪಡೆಯಾಗಲು ಮನಸ್ಸು ಮಾಡಿರಲಿಲ್ಲ.
ಆದರೆ ಜಯ್​ ಶಾ ಅಧಿಕಾರ ವಹಿಸಿಕೊಂಡಾಗಿನಿಂದ ಈ ನಿಲುವು ಬದಲಾಗಿದೆ.

1900ರಲ್ಲಿ ನಡೆದ ಒಲಂಪಿಕ್​ ಪಂದ್ಯಾವಳಿಯಲ್ಲಿ ಮಾತ್ರ ಕ್ರಿಕೆಟ್​ ಆಟವನ್ನು ಸೇರ್ಪಡೆ ಮಾಡಲಾಗಿತ್ತು. ಇದರಲ್ಲಿ ಗ್ರೇಟ್​ ಬ್ರಿಟನ್​ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು. “ಈ ಬಿಡ್‌ನ ಹಿಂದೆ ನಮ್ಮ ಕ್ರೀಡೆಯು ಒಂದುಗೂಡಿದೆ” ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು. ಅಲ್ಲದೇ ನಾವು ಒಲಿಂಪಿಕ್ಸ್ ಅನ್ನು ಕ್ರಿಕೆಟ್‌ನ ದೀರ್ಘಾವಧಿಯ ಭವಿಷ್ಯದ ಭಾಗವಾಗಿ ನೋಡುತ್ತೇವೆ. ನಮಗೆ ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ ಮತ್ತು ಸುಮಾರು 90 ಪ್ರತಿಶತ ಅವರಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಾರೆ ಎಂದಿದ್ದಾರೆ.

Leave a Comment

Your email address will not be published. Required fields are marked *