Ad Widget .

‘ಪದಕ ಗೆದ್ದ ದಿನ ನನ್ನನ್ನು ಸಿಂಗ್ ಅಭಿನಂದಿಸಿದ್ದರು, ಆದರೆ ಮೋದಿಯಂತೆ ನಟಿಸಿರಲಿಲ್ಲ’- ಬಾಕ್ಸರ್ ವಿಜೇಂದರ್ ಸಿಂಗ್ ಟೀಕೆ

Ad Widget . Ad Widget .

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಬಾಕ್ಸರ್ ವಿಜೇಂದರ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿಜೇಂದರ್ ಸಿಂಗ್ ‘ಒಲಿಂಪಿಕ್ಸ್ ನಲ್ಲಿ‌ ನಾನು ಪದಕ ಪಡೆದಾಗ ಡಾ.ಮನಮೋಹನ್ ಸಿಂಗ್ ಕೂಡ ಅಭಿನಂದಿಸಿದ್ದರು ಆದರೆ ಅವರು ಪಿಎಂ ಮೋದಿಯಂತೆ ನಾಟಕಿಯವಾಗಿ ವರ್ತಿಸಲಿಲ್ಲ’ಎಂದು ಹೇಳಿದ್ದಾರೆ.

Ad Widget . Ad Widget .

ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾಕ್ಸರ್ ವಿಜೇಂದರ್ ಸಿಂಗ್ ‘ಒಲಂಪಿಕ್ಸ್‌ ನಲ್ಲಿ ನಾನು ಗೆದ್ದಾಗ ಮನಮೋಹನ್ ಸಿಂಗ್ ಕೂಡ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಆದರೆ ಆತ ಯಾವತ್ತೂ ಫೋಟೊ ಅಥವಾ ವಿಡಿಯೋ ತೆಗೆದುಕೊಂಡಿಲ್ಲ. ಅವರು ಕೇವಲ ಫೋನ್‌ ಮಾಡಿ ಸ್ವಾಗತಿಸಿದರು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.
‘ ಈಗ ಅಭಿನಂದಿಸಿದ್ದನ್ನು ಅದನ್ನು ಹೇಗೆ ಪೋಟ್ರೇಟ್‌ ಮಾಡಲಾಗುತ್ತಿದೆ ನೋಡಿ. ಫೋಟೋಗಳನ್ನು ತೆಗೆಯಲಾಗಿದೆ, ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳನ್ನು ನೋಡಿದಾಗ ನನಗೆ ತುಂಬಾ ನಗು ಬರುತ್ತದೆ. ಇದು ಮೋದಿ ಸರ್ಕಾರದ ನಾಟಕ ಎಂದು ವಿಜೇಂದರ್ ಸಿಂಗ್ ಟೀಕಿಸಿದ್ದಾರೆ.

“ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅವರು ಕೂಡ ಕರೆ ಮಾಡುತ್ತಿದ್ದರು ಆದರೆ ಅದು ಫೋಟೋ ಅಥವಾ ರೆಕಾರ್ಡಿಂಗ್ ನಾಟಕವಾಗಿರಲಿಲ್ಲ ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಹೇಳಿಕೆ ಮೂಲಕ ದೇಶದ ಅನೇಕ ಜನರ ಹೃದಯ ಗೆದಿದ್ದಾರೆ. ಈ ಹಿಂದೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮರುನಾಮಕರಣ ಮಾಡಿದ್ದಕ್ಕಾಗಿ ವಿಜೇಂದರ್ ಸಿಂಗ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

“ಭಾಯ್, ಅವರು ಹೆಸರನ್ನು ಮಾತ್ರ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ, ಭಾರತವನ್ನು ಯುಎಸ್‌ಎ ಎಂದು ಮರುನಾಮಕರಣ ಮಾಡಲಾಗುತ್ತದೆ” ಎಂದು ವಿಜೇಂದರ್ ಸಿಂಗ್ ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದರು.

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುದು ಗಮನಾರ್ಹ. ಇದರ ನಂತರ, ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಆಟಗಾರರನ್ನು ಅಭಿನಂದಿಸುತ್ತಿದ್ದಾರೆ. ಪ್ರಧಾನಿ ಮೋದಿ ಅಭಿನಂದಿಸಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Leave a Comment

Your email address will not be published. Required fields are marked *