Ad Widget .

ಸುಳ್ಯ|ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಮಗ ಪತ್ನಿ ಜೊತೆ ನಿಗೂಢ ಕಣ್ಮರೆ

Ad Widget . Ad Widget .

ಸುಳ್ಯ: ಕೊರೊನಾ ಪಾಸಿಟಿವ್ ಬಂದ ಮಗ ತನ್ನ ಹೆತ್ತ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಸಂಪರ್ಕಕ್ಕೆ ಸಿಗದೆ ಪತ್ನಿ ಜೊತೆ ನಾಪತ್ತೆಯಾದ ಘಟನೆ ಸುಳ್ಯ ನಗರದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಸುಳ್ಯ ಪರಿಸರದಲ್ಲಿ ಬಳೆ ಮಾರಿ ಜೀವನ ಸಾಗಿಸುತ್ತಿದ್ದ ರಾಜೇಶ್ವರಿ ಮತ್ತು ವಿನಯ ಕುಮಾರ್ ಸಂಪರ್ಕಕ್ಕೆ ಸಿಗದೆ ಇರುವ ದಂಪತಿ. ಇವರು ವೃದ್ದ ತಾಯಿಯ ಜತೆ ಗಾಂಧಿನಗರ ಸಂತೋಷ್ ಚಿತ್ರಮಂದಿರದ ಎದುರಿನ ಬಿಲ್ಡಿಂಗ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ವಾರ ದಂಪತಿ ಕೊರೊನಾ ಪರೀಕ್ಷೆ ನಡೆಸಿದಾಗ ಅದರ ವರದಿ ಪಾಸಿಟಿವ್ ಬಂದಿತ್ತು. ವಿಷಯ ತಿಳಿದ ದಂಪತಿ ಶನಿವಾರ ತಾವಿದ್ದ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ತೆರಳಿದ್ದಾರೆ. ನಿನ್ನೆ ಮಧ್ಯಾಹ್ನದ ವೇಳೆ ಸ್ಥಳೀಯರಿಗೆ ಕೊಠಡಿಯ ಒಳಗಡೆಯಿಂದ ವೃದ್ದೆಯ ಕೂಗಾಡುವ ಶಬ್ದ ಕೇಳಿ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


ಸುಳ್ಯ ಠಾಣಾ ಎಸ್.ಐ.ಹರೀಶ್‍ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರಿದ್ದು ಬಾಗಿಲು ತೆರೆದು ವೃದ್ದೆಯನ್ನು ಉಪಚರಿಸಿದ್ದಾರೆ. ಎರಡು ದಿನದಿಂದ ಉಪವಾಸದಲ್ಲಿದ್ದ ವೃದ್ದೆಗೆ ಆಹಾರದ ವ್ಯವಸ್ಥೆ ಮಾಡಲಾಯಿತು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ನೇತ್ರತ್ವದಲ್ಲಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಇದಾದ ಬಳಿಕ ನಾಪತ್ತೆಯಾದ ದಂಪತಿಯ ದೂರವಾಣಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಎಲ್ಲಿಗೆ ಹೋಗಿದ್ದಾರೆಂದೂ ತಿಳಿದುಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Leave a Comment

Your email address will not be published. Required fields are marked *