Ad Widget .

ಎಸ್ಸೆಸೆಲ್ಸಿ ರಿಸಲ್ಟ್: ದ.ಕ ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳಿಗೆ ಔಟ್ ಆಪ್ ಔಟ್

Ad Widget . Ad Widget .

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಒಂಭತ್ತು ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ.

Ad Widget . Ad Widget .

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಗಣೇಶ್ ಎಚ್. ವೀರಾಪುರ ಜಿಲ್ಲೆಯಲ್ಲಿ ಶೇ 100 ಅಂಕ ಪಡೆದ ಕನ್ನಡ ಮಾಧ್ಯಮದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಅನನ್ಯಾ ಎಂ.ಡಿ. ಮತ್ತು ವೆನೆಸ್ಸಾ ಶರೀನ್ ಡಿಸೋಜಾ, ಮಂಗಳೂರು ಉರ್ವಾ ಕೆನರಾ ಪ್ರೌಢಶಾಲೆಯ ಕೀರ್ತನಾ ಶೆಣೈ, ಬೆಳ್ತಂಗಡಿ ಸೇಂಟ್‌ ಮೇರಿಸ್ ಪ್ರೌಢಶಾಲೆಯ ಎಂ. ಸಂಯುಕ್ತಾ ಡಿ. ಪ್ರಭು, ಬಂಟ್ವಾಳ ಎಸ್‌.ವಿ.ಎಸ್. ದೇವಸ್ಥಾನ ಪ್ರೌಢಶಾಲೆಯ ಎನ್. ಪ್ರತೀಕ್ ಮಲ್ಯ, ಮಂಗಳೂರು ಜೆಪ್ಪುವಿನ ಜೆರೋಸಾ ಬಾಲಕಿಯರ ಪ್ರೌಢಶಾಲೆಯ ರಿತಿಕಾ, ಪುತ್ತೂರು ತಾಲ್ಲೂಕಿನ ನೆಲ್ಯಾಡಿಯ ಸೇಂಟ್‌ ಜಾರ್ಜ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಶ್ರೀಶ ಶರ್ಮಾ ಕೆ.ಹಾಗೂ ಪುತ್ತೂರಿನ ಪಾಂಗಳಾಯಿ ಬೆಥನಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ತಾನಿಷಾ ರೈ 625ಕ್ಕೆ 625 ಅಂಕ ಪಡೆದಿದ್ದಾರೆ.

ಗರಿಷ್ಠ ಅಂಕ ಪಡೆದವರ ಪೈಕಿಯೂ ಜಿಲ್ಲೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ.

Leave a Comment

Your email address will not be published. Required fields are marked *