Ad Widget .

ಪ್ರೀತ್ಸೇ ಪ್ರೀತ್ಸೆ ಎಂದು ದುಂಬಾಲು ಬಿದ್ದ ಮೀಸೆ ಚಿಗುರದ ಪೋರ| ಕಾಟ‌ ತಾಳಲಾರದೆ ಬಾಲಕಿ ಆತ್ಮಹತ್ಯೆ

Ad Widget . Ad Widget .

ರಾಯಚೂರು: ಪ್ರೀತಿಗಾಗಿ ಪೀಡಿಸ್ತಿದ್ದ ಬಾಲಕನ ನಿತ್ಯ ಕಿರುಕುಳ ತಾಳಲಾಗದೆ 14 ವರ್ಷದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂಧನೂರ ತಾಲೂಕಿನ ಬಾಂಗ್ಲಾ ಕ್ಯಾಂಪ್ನಲ್ಲಿ ನಡೆದಿದೆ. ತಮನ್ನ (14) ಕ್ರಿಮಿನಾಷಕ ಸೇವಿಸಿ ಅತ್ನಹತ್ಯೆ ಮಾಡಿಕೊಂಡ ಬಾಲಕಿ.

Ad Widget . Ad Widget .

ಬಿನ್ನಿಮಯಿ ಬಿಸ್ವಾಸ (17) ಎಂಬ ಬಾಲಕ ತಮನ್ನ ಎಂಬ ಬಾಲಕಿಗೆ ನಿತ್ಯ ಚುಡಾಯಿಸ್ತಿದ್ದ. ಬಾಲಕಿ ತನ್ನ ಅಜ್ಜನ ಮನೆಗೆ ಹೊಗುವಾಗೆಲ್ಲ ಆಕೆಯನ್ನು ಹಿಂಬಾಲಿಸಿ ಪ್ರೀತಿ ಮಾಡುವಂತೆ ಒತ್ತಾಯಿಸ್ತಿದ್ದ. ಮದುವೆಯಾಗುವಂತೆ ಪೀಡಿಸ್ತಿದ್ದ. ಪ್ರೀತ್ಸೆ ಪ್ರೀತ್ಸೆ ಅಂತ ನಿತ್ಯ ಆತ ಕೊಡ್ತಿದ್ದ ಟಾರ್ಚರ್ಗೆ ಬಾಲಕಿ ಬೇಸತ್ತಿದ್ದಳು. ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ನಿನನ್ನು ಕಿಡ್ನ್ಯಾಪ್ ಮಾಡುತ್ತೀನಿ ಎಂದು ಬಾಲಕ, ಬಾಲಕಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಬಾಲಕಿ ಪೋಷಕರನ್ನ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ.

ಇದರಿಂದ ರೋಸಿ ಹೋಗಿದ್ದ ಬಾಲಕಿ ಮನೆಯಲ್ಲಿದ್ದ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆದ್ರೆ ಇದಕ್ಕೆಲ್ಲ ತಮನ್ನ ಪೋಷಕರ ಸೈಟ್ ಮೇಲೆ ಕಣ್ಣಿಟ್ಟಿದ್ದ ಶೃತಿ ಎಂಬ ಮಹಿಳೆ ಕಾರಣವೆಂದು ಕೆಲವರು ಆರೋಪಿಸ್ತಿದ್ದಾರೆ. ತಮನ್ನ ಪೋಷಕರಿಗೆ ಸೇರಿದ ಸೈಟ್ ತನಗೆ ಮಾರದಿದದ್ದಕ್ಕೆ ಶೃತಿ ಎಂಬ ಮಹಿಳೆ ಬಿನ್ನಿಮಯಿ ಎಂಬ ಬಾಲಕನನ್ನು ಬಾಲಕಿ ಹಿಂದೆ ಬಿಟ್ಟು ಹಿಂಸೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಸದ್ಯ ಬಾಲಕ ಬಿನ್ನಿಮಯಿ ಮತ್ತು ಶೃತಿ ವಿರುದ್ಧ ಸಿಂಧನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ಬಳಿಕವಷ್ಟೆ ಸತ್ಯ ಹೊರ ಬೀಳಲಿದೆ. ಆದ್ರೆ ಪ್ರೀತಿ ವಿಷಯಕ್ಕೆ ಬಾಲಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ…

Leave a Comment

Your email address will not be published. Required fields are marked *