ಕರಾವಳಿ ಭಾಗದಲ್ಲಿ ಹೆಚ್ಚಿನವರು ಇಷ್ಟಪಡುವ, ಸಿಹಿ ತಿಂಡಿಗಳಲ್ಲಿ ಒಂದಾಗಿರುವ ಸಂಜಿರ ತಿನ್ನಲು ಬಹು ರುಚಿಯಾಗಿರುವ ತಿನಿಸು. ಈ ತಿಂಡಿ, ನೋಡುವಾಗ ತಿಂಡಿ ತಯಾರು ಮಾಡಲು ತುಂಬಾ ಕಷ್ಟ ಎನ್ನ ಬಹುದು. ಆದರೆ ಹಾಗೇ ಅನಿಸಿದರು ಮಾಡಲು ತುಂಬಾ ಸುಲಭ. ಹಾಗಿದ್ರೆ ಅದನನ್ನು ಮಾಡುವುದು ಹೇಗೆ.? ಈ ಎಲ್ಲಾದರ ಬಗ್ಗೆ ತಿಳಿದುಕೊಳ್ಳುವ.
ಇದಕ್ಕೆ ಬೇಕಾಗುವ ಸಾಮಗ್ರಿಗಳು:
ಮೈದಾ- 1ಕಪ್, ರವೆ- ಸ್ವಲ್ಪ,, ಅರಿಶಿನ ಪುಡಿ, ಉಪ್ಪು ಸ್ವಲ್ಪ, ತೆಂಗಿನ ತುರಿ, ಸಕ್ಕರೆ ರುಚಿಗೆ ತಕ್ಕಷ್ಟು, ಎಣ್ಣೆ ಇತ್ಯಾದಿ.
ಮಾಡುವ ವಿಧಾನ: ಮೈದಾ, ಸ್ವಲ್ಪ ರವೆ, ಸ್ವಲ್ಪ ಅರಿಶಿನ, ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಸ್ವಲ್ಪನೆ ನೀರು ಸೇರಿಸಿ ಚಪಾತಿ ಹದಕ್ಕೆ ಕಲಸಿ 20 ನಿಮಿಷ ಕಾಲ ಹಾಗೆಯೇ ಇಡಬೇಕು.
ನಂತರ ಒಂದು ಬಾಣಲೆಯಲ್ಲಿ ರವೆ ಹಾಕಿ ಹುರಿಯಬೇಕು. ನಂತರ ಅದಕ್ಕೆ ತೆಂಗಿನ ತುರಿ, ಸಕ್ಕರೆ, ಏಲಕ್ಕಿ ಸೇರಿಸಿ 5 ನಿಮಿಷ ಹುರಿಯಬೇಕು.
ತಣ್ಣಗಾದ ಬಳಿಕ ಈ ಪಾಕವನ್ನು ಪೂರಿಯಷ್ಟು ಲಟ್ಟಿಸಿದ ಮೈದಾ ಹಿಟ್ಟಿನ ಒಳಗಡೆ ಇಟ್ಟು ತುಂಬಿ. ನಂತರ ಮತ್ತೇ ಪೂರಿ ಹದಕ್ಕೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಬಿಡಬೇಕು.
ಇದೀಗ ರುಚಿಕರವಾದ ಸಂಜಿರ ತಿಂಡಿಯನ್ನು ಮನೆಯಲ್ಲೇ ಮಾಡಿ ಸವಿಯಿರಿ. ಇದನ್ನು 5 ದಿನಗಳ ಕಾಲ ಮನೆಯಲ್ಲೇ ಶೇಖರಣೆ ಮಾಡಿ ಸವಿಯಬಹುದು.