Ad Widget .

ಬಾಲಕಿಯ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ಭರ್ಜರಿ ಗೂಸ

Ad Widget . Ad Widget .

Ad Widget . Ad Widget .

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಸ್ಥಳೀಯರು ಭರ್ಜರಿ ಗೂಸ ಕೊಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ಮೂಲದ ತಿಪ್ಪಯ್ಯ(42) ಗೂಸಾ ತಿಂದ ಆರೋಪಿ. ಈತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶುಗರ್ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಿರುವ ಸಾಲು ಮನೆಗಳ ಬಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ತಿಂಗಳಿಂದ ವಾಸವಾಗಿದ್ದ. ಇದೇ ವೇಳೆ 8 ವರ್ಷದ ಅಪ್ರಾಪ್ತ ಬಾಲಕಿಗೆ ಚಾಕ್ಲೇಟ್ ಆಮಿಷವೊಡ್ಡಿ ಕರೆದೊಯ್ದು, ಬಾಲಕಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಗಾಬರಿಗೊಂಡು ಜೋರಾಗಿ ಕಿರುಚಿದ್ದಾಳೆ.

ಬಾಲಕಿ ಅಳುತ್ತಿರುವ ಶಬ್ಧ ಕೇಳಿದ ಅಲ್ಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಮನೆಯಲ್ಲಿನ ಸ್ಥಿತಿ ಕಂಡು ತೀವ್ರ ಆಕ್ರೋಶಗೊಂಡಿರುವ ಸ್ಥಳೀಯರು ಆರೋಪಿ ತಿಪ್ಪಯ್ಯಗೆ ಭರ್ಜರಿ ಯಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದ ಸಾರ್ವಜನಿಕರ ಪ್ರಯತ್ನ ಗಮನಿಸಿದ ಆರೋಪಿ ಅಲ್ಲಿಂದ ಅನಾರೋಗ್ಯದ ಡ್ರಾಮಾ ಮಾಡಿ ಎಸ್ಕೇಪ್ ಆಗಿದ್ದಾನೆ. ಇನ್ನು ಬಾಲಕಿಯ ಪೋಷಕರು ಸಹ ಮಾರ್ಯಾದೆಗೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ.

ಆರೋಪಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಧರ್ಮದೇಟು ನೀಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.Gaza

Leave a Comment

Your email address will not be published. Required fields are marked *