ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮತ್ತೊಂದು ಕಂತು ದೇಶದ ರೈತರ ಖಾತೆಗೆ ನಾಳೆ ವರ್ಗಾವಣೆಯಾಗಲಿದೆ. ಪಿಎಂ-ಕಿಸಾನ್ ನ ಕಂತನ್ನು ಕೇಂದ್ರ ಸರ್ಕಾರವು ಆಗಸ್ಟ್ 9 ರಂದು ವಿತರಿಸಲಿದ್ದು, ಸರಿ ಸುಮಾರು 90 ಮಿಲಿಯನ್ ರೈತರಿಗೆ ಒಟ್ಟು 19,000 ಕೋಟಿ ರೂ ಪಿಎಂ-ಕಿಸಾನ್ ಅಡಿಯಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರ ಸರ್ಕಾರವು ಪ್ರತಿ ಭೂಮಿ ಹೊಂದಿರುವ ರೈತರಿಗೆ ಮಾಸಿಕ ದಾಖಲಾತಿಯೊಂದಿಗೆ ವಾರ್ಷಿಕ ರೂ. 6,000 ಆದಾಯದ ಬೆಂಬಲವನ್ನು ನೀಡುತ್ತಿದೆ.
ಪಿಎಂ ಕಿಸಾನ್ ಹಣವನ್ನು ವರ್ಷದಲ್ಲಿ ಮೂರು ಬಾರಿ ಜಮಾ ಮಾಡಲಾಗುತ್ತದೆ- ಅಂದರೆ ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಆಗಸ್ಟ್ ನಿಂದ ನವೆಂಬರ್ ವರೆಗೆ ಮತ್ತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಮೂರನೇ ಕಂತು ಬರುತ್ತದೆ. ಕೆಲವು ತಾಂತ್ರಿಕ ದೋಷಗಳಿಂದ ಹಣ ವರ್ಗಾವಣೆಯಲ್ಲಿ ನಿಧಾನವಾಗುವ ಹೊರತಾಗಿ ಅರ್ಜಿ ಸಲ್ಲಿಸಿದ ಅರ್ಹ ರೈತರ ಖಾತೆಗೆ ನಿಗದಿತ ಮೊತ್ತ ಜಮೆಯಾಗುತ್ತಿದೆ.
ಪಿಎಂ ಕಿಸಾನ್ ಜಮೆಯಾಗಿದ್ದನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ಪಿಎಂ ಕಿಸಾನ್ ಪಾವತಿ ಸ್ಥಿತಿ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಹಂತ 1 – ಪಿಎಂ-ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಹೋಗಿ – pmkisan.gov.in
ಹಂತ 2 – ಈಗ ಮುಖಪುಟದ ಬಲಬದಿಯಲ್ಲಿ ‘ಫಾರ್ಮರ್ಸ್ ಕಾರ್ನರ್’ ನೋಡಿ
- ‘ಫಾರ್ಮರ್ಸ್ ಕಾರ್ನರ್’ , ನೀವು ಯೋಜನೆಗೆ ಸ್ವಯಂ ನೋಂದಣಿ ಮಾಡಬಹುದು, ಆಧಾರ್ ವಿವರಗಳನ್ನು ಸಂಪಾದಿಸಬಹುದು, ಫಲಾನುಭವಿಯ ಸ್ಥಿತಿ, ಪಟ್ಟಿ ಮತ್ತು ಇನ್ನೂ ಅನೇಕ ವಿಷಯಗಳನ್ನು ಪರಿಶೀಲಿಸಬಹುದು.
ಹಂತ 3 – ಈಗ ಫಲಾನುಭವಿ ಸ್ಥಿತಿ ಲಿಂಕ್ ಮೇಲೆ
ಹಂತ 4 – ಈಗ ಮೂರು – ಆಧಾರ್ ಸಂಖ್ಯೆ / ಖಾತೆ ಸಂಖ್ಯೆ / ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 5 – ನಂತರ ಡೇಟಾ ಗೆಟ್ ಮೇಲೆ
ಹಂತ 6 – ಪಿಎಂ ಕಿಸಾನ್ ಪಾವತಿ ಸ್ಥಿತಿಯನ್ನು ಸ್ಕ್ರೀನ್ ನಲ್ಲಿ ಪ್ರದರ್ಶಿಸಲಾಗುತ್ತದೆ. ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಅಗತ್ಯವೆನಿಸಿದರೆ ಅಗತ್ಯ ಬದಲಾವಣೆಗಳನ್ನು ಮಾಡಿ.
ನೀವು ಅರ್ಹರಾಗಿದ್ದರೆ ನಿಮ್ಮ ಖಾತೆಗೆ ಜಮೆಯಾದ ಮೊತ್ತವನ್ನು ಜಾಲತಾಣ ಪ್ರದರ್ಶಿಸುತ್ತದೆ.