Ad Widget .

ಅತ್ತೆ- ಅಳಿಯನ ನಡುವೆ ಲವ್ವಿಡವ್ವಿ! ಇವರಿಬ್ಬರ ಪ್ರೀತಿಗೆ ಮಗಳು ಕಂಗಾಲು

Ad Widget . Ad Widget .

ಪ್ರೀತಿ ಕುರುಡು ಅಂತಾರೆ ಕೆಲವರು. ಆದರೆ ಅದು ಇಷ್ಟೊಂದು ಕುರುಡು ಅಂತ ಈಗೀಗ ಗೊತ್ತಾಗ್ತಿದೆ. ಪ್ರೀತಿ ವಿಷಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅಂತದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ ಇಲ್ಲಿ ಅತ್ತೆ – ಅಳಿಯ ಪ್ರೀತಿಗೆ ಬಿದ್ದು ಮಗಳು ಅನಾಥಳಾಗುವಂತೆ ಮಾಡಿದ್ದಾರೆ. ಕೈಹಿಡಿದ ಪತ್ನಿಗೆ ಕೈಕೊಟ್ಟ ಅಳಿಯ ಅತ್ತೆಯೊಂದಿಗೆ ಮರ ಸುತ್ತುತ್ತಿದ್ದಾನೆ.

Ad Widget . Ad Widget .

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ ಮುಜಫರ್ ಜಿಲ್ಲೆಯಲ್ಲಿ. 50 ವರ್ಷದ ಮಹಿಳೆ, ಕೆಲ ತಿಂಗಳ ಹಿಂದೆ ಮಗಳ ಮದುವೆ ಮಾಡಿದ್ದಳು. ಆದರೆ ಮಗಳ ಗಂಡನ ಮೇಲೆ ಅತ್ತೆಗೆ ಮನಸ್ಸಾಗಿದೆ. 25 ವರ್ಷದ ಅಳಿಯನನ್ನು ಅತ್ತೆ ಪ್ರೀತಿಸಲು ಶುರು ಮಾಡಿದ್ದಾಳೆ. ಅಳಿಯ ಕೂಡ ಅತ್ತೆ ಪ್ರೀತಿಗೆ ಬಿದ್ದು, ಮನೆಯಿಂದ ಓಡಿ ಹೋಗಿದ್ದಾನೆ.

ಹತ್ತು ತಿಂಗಳುಗಳ ಕಾಲ ದೂರದೂರಿನಲ್ಲಿ ವಾಸವಾಗಿದ್ದ ಅವರು ನಂತರ ಊರಿಗೆ ಬಂದಿದ್ದಾರೆ. ಇಬ್ಬರು ಮದುವೆಯಾಗುವುದಾಗಿ ಹೇಳಿದ್ದಾರೆ. ಇದನ್ನು ಕೇಳಿದ ಮನೆಯವರು ದಂಗಾಗಿದ್ದಾರೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸ್ ಮುಂದೆಯೂ ಪ್ರೀತಿ ಬಿಟ್ಟುಕೊಡದ ಜೋಡಿ ಈಗ ಬೇರೆ ವಾಸ ಶುರು ಮಾಡಿದ್ದಾರೆ. ಇವರಿಬ್ಬರ ಪ್ರೀತಿ ನಡುವೆ ಅವಳೊಬ್ಬಳು ಅನಾಥಳಾಗಿದ್ದಾಳೆ.

Leave a Comment

Your email address will not be published. Required fields are marked *