Ad Widget .

ಬ್ಲೂಟೂತ್ ಹೆಡ್ ಫೋನ್ ಸ್ಪೋಟಗೊಂಡು ಯುವಕ ಸಾವು| ದೇಶದಲ್ಲೇ ಮೊದಲ ದುರಂತ

ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ಯುವಕನೊಬ್ಬ ಬ್ಲೂಟೂತ್ ಹೆಡ್‌ಫೋನ್ ಸಾಧನ ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ. ವೈರ್‌ಲೆಸ್ ಗ್ಯಾಜೆಟ್ ಸ್ಫೋಟಗೊಂಡ ನಂತರ ಯುವಕ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಬ್ಲೂ ಟೂತ್ ಸ್ಪೋಟಗೊಂಡ ಮೊದಲ ಪ್ರಕರಣ ಇದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೃತ ಯುವಕನನ್ನು ಜೈಪುರದ ಚೌಮು ಪ್ರದೇಶದ ಉದೈಪುರಿಯಾ ಗ್ರಾಮದ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ಈತ ಹೆಚ್ಚಾಗಿ ತನ್ನ ಬ್ಲೂಟೂತ್ ಇಯರ್‌ಫೋನ್‌ ಬಳಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವೈರ್‌ಲೆಸ್ ಸಾಧನ ಸ್ಫೋಟಗೊಂಡು ರಾಕೇಶ್ ಪ್ರಜ್ಞಾಹೀನನಾದ. ಸ್ಫೋಟದಲ್ಲಿ ಯುವಕನ ಎರಡೂ ಕಿವಿಗಳಿಗೆ ಗಾಯಗಳಾಗಿವೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Ad Widget . Ad Widget . Ad Widget .

ಈ ಕುರಿತು ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾತನಾಡಿದ್ದು, ಬ್ಲೂಟೂತ್ ಇಯರ್ ಫೋನ್ ಸಾಧನ ಸ್ಫೋಟಗೊಂಡ ನಂತರ ಯುವಕ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಬಹುಶಃ ದೇಶದಲ್ಲಿ ಇದೇ ಮೊದಲ ಪ್ರಕರಣವೆಂದೂ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *