Ad Widget .

ಬಂಟ್ವಾಳ: ಅನೈತಿಕ ಸಂಬಂಧ ಶಂಕೆ| ತಮ್ಮನ ಕೊಲೆಗೈದ ಅಣ್ಣ|

ಬಂಟ್ವಾಳ: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಣ್ಣನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೊಂಡಾಲ ಶಾಂತಿಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಾಂತಿಗುಡ್ಡೆ ನಿವಾಸಿ ಸುಂದರ (30) ಕೊಲೆಯಾದ ವ್ಯಕ್ತಿ. ಅಣ್ಣ ರವಿ ಎಂಬಾತ ಕೊಲೆ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget . Ad Widget . Ad Widget .

ಕೊಲೆಯಾದ ಸುಂದರ ಅವಿವಾಹಿತನಾಗಿದ್ದು ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಮನೆಯ ಸಮೀಪದಲ್ಲಿ ಅಣ್ಣ ರವಿಯ ಮನೆಯಿದ್ದು ಅಲ್ಲಿಂದ ರವಿಯ ಹೆಂಡತಿ ಊಟ ತಿಂಡಿ‌ ನೀಡುತ್ತಿದ್ದರು ಎನ್ನಲಾಗಿದೆ.

ತನ್ನ ಹೆಂಡತಿ ಜೊತೆ ಅನೈತಿಕ‌ ಸಂಬಂಧವಿದೆ ಎಂದು ಶಂಕಿಸಿ ರವಿ ಪದೇ ಪದೇ ಸುಂದರನೊಂದಿಗೆ ಜಗಳ ಮಾಡುತ್ತಾ ಇದ್ದ ಎನ್ನಲಾಗಿದೆ. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು ಸುಂದರನ ಬೊಬ್ಬೆ ಕೇಳಿ ಅಲ್ಲೇ ಸಮೀಪದಲ್ಲಿ ವಾಸವಿರುವ ಮತ್ತೋರ್ವ ಅಣ್ಣ ರಮೇಶ ಬಂದು ನೋಡಿದಾಗ ರವಿಯು ಸುಂದರನಿಗೆ ಸಲಾಕೆಯಿಂದ ತಲೆಗೆ ಹೊಡೆದಿದ್ದು ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ಆರೈಕೆ ಮಾಡುತ್ತಿದ್ದಂತೆ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಬಳಿಕ ಆರೋಪಿ ರವಿ ಓಡಿ ತಲೆ ಮರೆಸಿಕೊಂಡಿದ್ದು ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *