Ad Widget .

ಮತ್ತೊಂದು ‘ಮೈಸೂರು ಮಲ್ಲಿಗೆ’ ಪರಿಮಳ| ಪ್ರೊಫೆಸರ್ ನ ಕಾಮಪುರಾಣ ಬಿಚ್ಚಿಟ್ಟ ಪತ್ನಿ…!

ಮೈಸೂರು: ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪತ್ನಿಯ ಕೈಗೇ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಹಾಕಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮತ್ತಷ್ಟು ಕಾಮಪುರಾಣವನ್ನು ಅವರ ಪತ್ನಿಯೇ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

Ad Widget . Ad Widget .

ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ತನ್ನಿಂದ ಪಿಎಚ್​ಡಿ ಮಾರ್ಗದರ್ಶನ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದು, ಅದಾದ ಸ್ವಲ್ಪ ಸಮಯಕ್ಕೆ ಪತ್ನಿಯೂ ಮನೆಗೆ ಬಂದಿದ್ದರಿಂದ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿದ್ಯಾರ್ಥಿನಿ ಹಾಗೂ ಪತಿ ಇಬ್ಬರನ್ನೂ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಗೆ ಕರೆದುಕೊಂಡು ಬಂದಿರುವ ಪತ್ನಿ ಲೋಲಾಕ್ಷಿ, ಪೊಲೀಸರ ಮುಂದೆ ಪತಿಯ ಕಾಮಪುರಾಣವನ್ನು ವಿವರಿಸಿದ್ದಾರೆ.

Ad Widget . Ad Widget .

ನನ್ನ ಪತಿ ಪ್ರೊ.ರಾಮಚಂದ್ರ ಡಿಪಾರ್ಟ್​​ಮೆಂಟ್​ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ.
ಅವರಿಂದ ಪಿಎಚ್‌ಡಿ ಮಾರ್ಗದರ್ಶನ ಪಡೆಯುವ ಕೆಲ ಪುರುಷ ವಿದ್ಯಾರ್ಥಿಗಳು ಪತಿಯ ಬಳಿಗೆ ಯುವತಿಯರನ್ನು ಕಳುಹಿಸುತ್ತಿದ್ದರು. ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ಅದು ಇಂದು ಸಾಬೀತಾಗಿದೆ ಎಂದಿರುವ ಪತ್ನಿ ಲೋಲಾಕ್ಷಿ, ಇವತ್ತು ನಡೆದ ಘಟನೆಯನ್ನೂ ಪೊಲೀಸರಿಗೆ ವಿವರಿಸಿದ್ದಾರೆ.

ನಾನು ಇಂದು ಕಾಲೇಜಿಗೆ ಹೋಗಿದ್ದೆ. ಆದರೆ ಸ್ಟಡಿ ಮೆಟಿರಿಯಲ್​ ತೆಗೆದುಕೊಳ್ಳುವ ಸಲುವಾಗಿ ಮನೆಗೆ ವಾಪಸ್ ಬಂದಿದ್ದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆ ನನ್ನ ಕಾಲು ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಅಂತ ಹೇಳಿಕೊಂಡಳು. ಕೂಡಲೇ ಇಬ್ಬರನ್ನೂ ಪೋಲಿಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ಬೇರೆ ಯಾವ ಯುವತಿಯರ ಮೇಲೂ ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ-ಕುಲಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಆರೋಪಿಯ ಪತ್ನಿ, ಮೈಸೂರು ವಿವಿಯ ಪ್ರಾಧ್ಯಾಪಕಿಯೂ ಆಗಿರುವ ಡಾ.ಲೋಲಾಕ್ಷಿ ಪೊಲೀಸರಿಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *