ಬೆಂಗಳೂರು: 2 ದಿನಗಳ ಹಿಂದೆ ಮಂದಿ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದ ನೂತನ ಸಚಿವರಿಗೆ ಸಿಎಂ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಹೆಚ್ಚೇನೂ ಕೈಚಳಕ ತೋರದ ಬೊಮ್ಮಾಯಿ ಹಿಂದಿನ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕ ಮಂದಿಯನ್ನು ಅದೇ ಖಾತೆಯಲ್ಲಿ ಮುಂದುವರೆಸಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿದ್ದ 23 ಮಂದಿ ಬೊಮ್ಮಾಯಿ ಅವರ ಕ್ಯಾಬಿನೆಟ್ನಲ್ಲಿ ಮತ್ತೆ ಮಂತ್ರಿಯಾಗಿದ್ದಾರೆ. 6 ಮಂದಿ ಹೊಸದಾಗಿ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ. ಯಾವೆಲ್ಲಾ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಯಾರಿಗೆ ಯಾವ ಖಾತೆ ಕೊಟ್ಟಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ. ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಯಾರಿಗೆ ಯಾವ ಖಾತೆ?
ಆರ್. ಅಶೋಕ್- ಬೆಂಗಳೂರು ನಗರಾಭಿವೃದ್ಧಿ
ಡಾ ಅಶ್ವತ್ಥ ನಾರಾಯಣ- ಐಟಿ ಬಿಟಿ ಉನ್ನತ ಶಿಕ್ಷಣ
ಡಾ.ಸುಧಾಕರ್ – ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ
ಎಂಟಿಬಿ ನಾಗರಾಜ್ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ
ಗೋವಿಂದ ಕಾರಜೋಳ – ಜಲ ಸಂಪನ್ಮೂಲ ಖಾತೆ
ಬಿ.ಸಿ.ನಾಗೇಶ್ – ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ
ಅರಗ ಜ್ಞಾನೇಂದ್ರ- ಅರಣ್ಯ ಖಾತೆ
ಶಶಿಕಲಾ ಜೊಲ್ಲೆ – ಸಾಂಖ್ಯಿಕ ಖಾತೆ
ಎಸ್.ಟಿ.ಸೋಮಶೇಖರ್- ಸಹಕಾರ
ಭೈರತಿ ಬಸವರಾಜ್ – ನಗರಾಭಿವೃದ್ಧ
ಎಸ್.ಅಂಗಾರ – ಬಂದರು ಮತ್ತು ಮೀನುಗಾರಿಕೆ
ಕೋಟಾ ಶ್ರೀನಿವಾಸ ಪೂಜಾರಿ – ಹಿಂದುಳಿದ ವರ್ಗ , ಮುಜರಾಯಿ, ಕನ್ನಡ ಸಂಸ್ಕೃತಿ
ಮುರುಗೇಶ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
ಉಮೇಶ್ ಕತ್ತಿ- ಲೋಕೋಪಯೋಗಿ ಖಾತೆ
ಶಿವರಾಮ್ ಹೆಬ್ಬಾರ್ – ಕಾರ್ಮಿಕ
ಮುನಿರತ್ನ – ಪೌರಾಡಳಿತ ಖಾತೆ
ಸಿ ಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ ಖಾತೆ
ಗೋಪಾಲಯ್ಯ – ಅಬಕಾರಿ
ನಾರಾಯಣಗೌಡ- ರೇಷ್ಮೆ ಖಾತೆ
ಮಾಧುಸ್ವಾಮಿ- ಕಾನೂನು ಸಂಸದೀಯ , ಸಣ್ಣ ನೀರಾವರಿ
ಆನಂದಸಿಂಗ್ ಪರಿಸರ – ಜೀವಶಾಸ್ತ್ರ
ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರಿಗೆ ಬೊಮ್ಮಾಯಿ ಸಂಪುಟದಲ್ಲೂ ಬಹುತೇಕ ಹಿಂದಿನ ಖಾತೆಗಳೇ ಮುಂದುವರೆದಿದೆ. ಗೃಹ, ಹಣಕಾಸು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗಳು ಸಿಎಂ ಬಳಿಯಲ್ಲಿಯೇ ಇದ್ದು, ಯಾರಿಗೆ ಈ ಖಾತೆ ಹೋಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.