Ad Widget .

ಮಂಗಳೂರಿಗೆ ಕಾಲಿಟ್ಟ ‘ಇಟಾ’ ವೈರಸ್| ಕತರ್ ನಿಂದ ಬಂತು ಮಹಾಮಾರಿ|

Ad Widget . Ad Widget .

ಮಂಗಳೂರು:. ಕೊರೋನಾ ಏರಿಕೆಯ ನಡುವೆ ಡೆಲ್ಟಾ ಸೋಂಕಿನ ಜೊತೆಗೆ ಇದೀಗ ಮತ್ತೊಂದು ಶಾಕ್ ಗೆ ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದಾರೆ.

Ad Widget . Ad Widget .

ಎರಡು ತಿಂಗಳ ಹಿಂದೆ ಕತರ್ ನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೋರ್ವರಲ್ಲಿ ಗುರುವಾರದಂದು ಕೊರೋನಾ ಸೋಂಕಿನ ಹೊಸ ತಳಿ ‘ಇಟಾ’ (ಬಿ.1.525) ವೈರಾಣು ಪತ್ತೆಯಾಗಿದೆ. ಇದರ ಜೊತೆಗೆ ಹೊಸದಾಗಿ ಒಂದು ಡೆಲ್ಟಾ ಪ್ಲಸ್‌ ಪ್ರಕರಣ ಕೂಡ ಕಂಡುಬಂದಿದ್ದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಾಣು ಹೊಂದಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹೊಸದಾಗಿ ಕಂಡುಬಂದಿರುವ ಇಟಾ ವೈರಾಣುವಿನ ಬಗ್ಗೆ ತಿಳಿಯಲು ಇನ್ನಷ್ಟೇ ಅಧ್ಯಯನಗಳು ನಡೆಯಬೇಕಿದೆ ಎನ್ನಲಾಗಿದೆ. ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗಿದೆಯಾ ಎನ್ನುವ ಸಂಶಯ ಮೂಡಿಬಂದಿದೆ. ಆಗಸ್ಟ್ ಎರಡನೇ ವಾರದಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಏರಿಕೆಯಾಗಲಿದೆ ಎಂದು ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಹೀಗಾದರೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ

Leave a Comment

Your email address will not be published. Required fields are marked *