Ad Widget .

ಸಂಪುಟದಲ್ಲಿ ಯಡ್ಡಿ ಪರಾಕ್ರಮ, ಸದ್ದಿಲ್ಲದ ಕಟೀಲ್ ‘ಕಾಮಿಡಿ ಪಂಚ್’, ಅಂಗನವಾಡಿ ಮೊಟ್ಟೆ ಕದ್ದವರಿಗೆ ‘ರಾಜ’ ಮರ್ಯಾದೆ – ಕಾಂಗ್ರೆಸ್ ಟೀಕೆ

Ad Widget . Ad Widget .

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ಕಾರಣರಾದವರ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

Ad Widget . Ad Widget .

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ತಮ್ಮ ವಿರುದ್ಧದ ಬಂಡಾಯಗಾರರನ್ನು ಸಂಪುಟದಿಂದ ದೂರವಿಡುವ ಮೂಲಕ ನಳೀನ್ ಕುಮಾರ್ ಕಟೀಲ್‌ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ. ಕಟೀಲ್ ಕಾಮಿಡಿ ಮಾಡಲು ಮಾತ್ರ. ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ ಬಿಎಸ್‌ವೈ ಅವರೇ ಹೈಕಮಾಂಡ್ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದೆ.

ಮೊದಲೆಲ್ಲ ಕಾಂಗ್ರೆಸ್‌ಗೆ ‘ಹೈಕಮಾಂಡ್ ಸಂಸ್ಕೃತಿ’ ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ ‘ಬಲಿಷ್ಠ ಹೈಕಮಾಂಡ್’ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು!
ಯಡಿಯೂರಪ್ಪ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ ಎಂದು ಪ್ರಶ್ನಿಸಿದೆ.

ಮೊಟ್ಟೆ ಖರೀದಿ ಹಗರಣ ನಡೆಸಿದ ಶಶಿಕಲಾ ಜೊಲ್ಲೆಯವರನ್ನ ಝಿರೋ ಟ್ರಾಫಿಕ್‌ ರಾಜಮರ್ಯಾದೆಯಲ್ಲಿ ಕರೆತಂದು ಸರ್ಕಾರದಲ್ಲಿ ಮಂತ್ರಿಗಿರಿ ಕೊಡುವ ಮೂಲಕ ಬಿಜೆಪಿ ಭ್ರಷ್ಟಾಚಾರವನ್ನು ತಮ್ಮ ‘ಮನೆದೇವರು’ ಎಂಬುದನ್ನ ಸಾರಿ ಹೇಳುತ್ತಿದೆ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಬಡ ಮಕ್ಕಳ ಮೊಟ್ಟೆ ತಿಂದಿದ್ದನ್ನ ತನಿಖೆಗೆ ವಹಿಸದೆ ಸಿಎಂ ಸಮರ್ಥಿಸಿಕೊಳ್ಳುವುದು ನೈತಿಕ ಅದಃಪತನ ಎಂದು ಚಾಟಿ ಬೀಸಿದೆ.

Leave a Comment

Your email address will not be published. Required fields are marked *