Ad Widget .

ಟೋಕಿಯೋ ಒಲಿಂಪಿಕ್, ಭಾರತಕ್ಕೆ ‌ಮತ್ತೊಂದು ಬೆಳ್ಳಿ ಪದಕ; ರೆಸ್ಲಿಂಗ್ ನಲ್ಲಿ ರಜತಕ್ಕೆ ಮುತ್ತಿಕ್ಕಿದ ರವಿಕುಮಾರ್ ದಹಿಯಾ

ಟೋಕಿಯೋ: 57 ಕೆಜಿ ವಿಭಾಗದ ರೆಸ್ಲಿಂಗ್‌ ಫೈನಲ್ ಸ್ಪರ್ಧೆಯಲ್ಲಿ ಭಾರತದ ರವಿಕುಮಾರ್ ದಾಹಿಯಾ ಸೋಲು ಕಂಡಿದ್ದಾರೆ. ಹೀಗಾಗಿ ಚಿನ್ನದ ಪದಕ ಗೆಲ್ಲುವ ಪ್ರಯತ್ನದಲ್ಲಿ ಭಾರತ ವಿಫಲವಾಗಿದೆ. ಆದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಎರಡನೇ ಬೆಳ್ಳಿಯ ಪದಕ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.

Ad Widget . Ad Widget .

ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ವಿರುದ್ಧದ ಫೈನಲ್‌ನಲ್ಲಿ ರವಿ ಕುಮಾರ್ ದಾಹಿಯಾ ಹಿನ್ನಡೆಯನ್ನು ಅನುಭವಿಸಿದರು. ಮೊದಲ ಹಂತದಲ್ಲಿ 2-4 ಅಂತರದಿಂದ ಹಿನ್ನೆಡೆಯಲ್ಲಿದ್ದ ರವಿ ಕುಮಾರ್ ಬಳಿಕ 4-7 ಅಂತರದಿಂದ ಸೋಲು ಕಂಡರು. ಈ ಮೂಲಕ ರವಿ ಕುಮಾರ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ವಿಫಲವಾದರು.

Ad Widget . Ad Widget .

ಆದರೆ ಟೋಕಿಯೋ ಒಲಿಂಪಿಕಲ್ಸ್‌ನಲ್ಲಿ ಭಾರತಕ್ಕೆ ಎರಡನೇ ಬೆಳ್ಳಿ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ

Leave a Comment

Your email address will not be published. Required fields are marked *