Ad Widget .

ಬೈಕ್ ಬೇಕೆಂದು ಬಾಳಿಗೆ ಕೊಳ್ಳಿ ಇಟ್ಟುಕೊಂಡ ಯುವಕ

Ad Widget . Ad Widget .

ವಿಜಯನಗರ: ಬಾಳಿ ಬದುಕಬೇಕಿದ್ದ ಯುವಕನೊಬ್ಬ ಬೈಕ್​ಗಾಗಿ ತನ್ನ ಬಾಳಿಗೆ ಕೊಳ್ಳಿ ಇಟ್ಟುಕೊಂಡ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

Ad Widget . Ad Widget .

ಹೊಸಪೇಟೆ ತಾಲೂಕಿನ ಪೊತಲಕಟ್ಟಿ ಗ್ರಾಮದ ನಿವಾಸಿ ಸ್ವಾಮಿ(21) ಮೃತ ದುರ್ದೈವಿ.

ಸ್ವಾಮಿಗೆ ಬೈಕ್​ ಅಂದ್ರೆ ಪಂಚಪ್ರಾಣ. ನನಗೂ ಒಂದು ಸ್ವಂತ ಬೈಕ್ ಬೇಕು, ಕೊಡಿಸು ಎಂದು ಅಪ್ಪನ ಬಳಿ ಹಲವು ಬಾರಿ ಕೇಳಿದ್ದ. ಆದರೆ, ಸದ್ಯಕ್ಕೆ ಬೇಡ ಮಗನೆ. ಮುಂದೆ ಕೊಡಿಸುವೆ.​ ಈಗ ಹಣ ಇಲ್ಲ ಎಂದು ತಂದೆ ಎಷ್ಟೇ ಹೇಳಿದರೂ ಆತ ಮಾತ್ರ ತನ್ನ ಹಠ ಬಿಡಲೇ ಇಲ್ಲ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಸಣ್ಣ ಜಗಳವೂ ಆಗಿತ್ತೆಂದು ಹೇಳಲಾಗಿದೆ.

ಬೈಕ್​ ಕೊಡಿಸಲಿಲ್ಲ ಎಂದು ಮನನೊಂದ ಮಗ ವಿಷ ಸೇವಿಸಿದ್ದ. ಕೂಡಲೇ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಬದುಕುಳಿಯಲಿಲ್ಲ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *