Ad Widget .

ಪ್ರಿಯಕರನ ಜೊತೆ ಸೇರಿ ಪತಿಯ ಬದುಕಿಗೆ ಕೊಳ್ಳಿಯಿಟ್ಟ ಪತ್ನಿ, ಸುರಸುಂದರಿಯ ಲವ್ವಿ ಡವ್ವಿಗೆ ಮಗು ತಬ್ಬಲಿ

Ad Widget . Ad Widget .

ಬೆಂಗಳೂರು: ಪ್ರಿಯಕರನ ಜೊತೆ ಕಾಲ ಕಳೆಯಲು ಪತಿಯಿಂದ ಅಡ್ಡಿಯಾಗುತ್ತಿದೆ ಎಂದು ಪತಿಯನ್ನೇ ಕೊಂದು, ನಾಪತ್ತೆಯ ನಾಟಕವಾಡಿ ಪತ್ನಿ ಸಿಕ್ಕಿಬಿದ್ದ ಘಟನೆ ಕೆ.ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಬಂಧಿತ ಆರೋಪಿಗಳು. ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕವಾಗಿದ್ದ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಗೆ ಸಂಜೀವ್ ಸ್ನೇಹಿತನಾಗಿದ್ದ, ಇಬ್ಬರು ಜೊತೆಯಲ್ಲಿ ಇರುತಿದ್ದರು, ಅದಲ್ಲದೆ ಕಾರ್ತಿಕ್ ತನ್ನದೇ ಮನೆಯಲ್ಲಿ ಸಂಜೀವ್ ಗೆ ಆಸರೆ ನೀಡಿದ್ದ. ಆದರೆ ಆರೋಪಿ ಸಂಜೀವ್ ಸ್ನೇಹಎಂಬುವುದನ್ನು ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿದಲ್ಲದೆ, ಕಾರ್ತಿಕ್ ಇಲ್ಲದವೇಳೆ ಸಂಜೀವ್ ರಂಜಿತಾನ ಜೊತೆಗೆ ಮಲಗುತ್ತಿದ್ದ ಎನ್ನಲಾಗಿದೆ. ಇವರ ಪ್ರೀತಿ ರಂಜಿತಾ ತನ್ನ ಗಂಡನನ್ನು ತೊರೆದು ಸಂಜೀವ್ ನನ್ನು ಮದುವೆ ಮಾಡಿಕೊಳ್ಳುವ ಹಂತಕ್ಕೆ ತಲುಪಿತ್ತು. ಈ ಎಲ್ಲದರ ಮಧ್ಯ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಆತನ ಕೊಲೆಗೆ ಸ್ಕೆಚ್ ಹಾಕುತ್ತಾರೆ.

ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿರುತ್ತಾರೆ.

ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ.

ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ನಾಲ್ಕು ವರ್ಷದ ಮಗು ತಬ್ಬಲಿ :
ಅಪ್ಪ ಯಮಲೋಕ ಸೇರಿದರೆ, ತಾಯಿ ಜೈಲು ಸೇರುತ್ತಾಳೆ. ಇದರಿಂದ ಪುಟ್ಟ ಕಂದಮ್ಮನಿಗೆ ಯಾರು ಇಲ್ಲದಂತಾಗಿದೆ. ಹಾಗಾಗಿ ಗಂಡ ಹೆಂಡತಿಯ ಸಂಬಂಧದ ಮಧ್ಯೆ ಉಂಟಾದ ಬಿರುಕಿನಿಂದ ನಾಲ್ಕು ವರ್ಷದ ಮಗು ತಬ್ಬಲಿಯಾಗಿದ್ದಾಳೆ.

Leave a Comment

Your email address will not be published. Required fields are marked *