ಮಧ್ಯಪ್ರದೇಶ: ಇಲ್ಲಿನ ಭಿಂದ್ ಜಿಲ್ಲೆಯಲ್ಲಿ ಕೊಲೆ ಪ್ರಕರಣವನ್ನ ಭೇದಿಸಲು ಕಾಂಡೋಮ್ ಪ್ರಮುಖ ಕೊಂಡಿಯಾಗಿ ಕೆಲಸ ಮಾಡಿದ್ದು, ಹಂತಕರ ಸುಳಿವು ನೀಡಿ ಜೈಲಿಗಟ್ಟಿದ ರೋಚಕ ಪ್ರಕರಣ ಬಯಲಾಗಿದೆ.
ರೋಶ್ನಿ ಕೊಲೆಯಾದ ಯುವತಿ. ಪ್ರೀಯಕರ ಅಂಕಿತ್, ಈತನ ಸ್ನೇಹಿತರಾದ ಪ್ರಶಿಸ್ ಖಾನ್ ಮತ್ತು ಸುಮಿತ್ ದಿವಾರ್ ಬಂಧಿತ ಆರೋಪಿಗಳು. ಜೂನ್ ೧೭ ರಂದು ಅತ್ಯಾಚಾರವೆಸಗಿ ಕೊಲೆಗೈದ ಅಪರಿಚಿತ ಮಹಿಳೆಯೊರ್ವಳ ಶವ ಭಿಂದ್ ಕೆಮೋಖಾರಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಕರಣವನ್ನ ದಾಖಲಿಸಿಕೊಂಡು ತನಿಖೆಯನ್ನ ಕೈಗೆತ್ತಿಕೊಂಡಿದ್ದಾರೆ. ಅದರೆ ಈ ಪ್ರಕರಣವನ್ನು ಭೇದಿಸಲು ಪೋಲಿಸರಿಗೆ ತುಂಬನೇ ಕಠಿಣವಾಗಿತ್ತು. ಕಾರಣ ಕೊಲೆಯಾದ ಮಹಿಳೆ ಆ ಊರಿನವಳಲ್ಲ. ಅದು ಅಲ್ಲದೇ ಆಕೆಯ ಪರಿಚಯವೂ ಅಲ್ಲಿನ ಜನರಿಗೆ ಇರಲಿಲ್ಲ.
ಆರೋಪಿಗಳು ಆತ್ಯಾಚಾರವೆಸಗಿ ಕೊಲೆ ಮಾಡಿ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮಹಿಳೆಯ ಶವವನ್ನ ಹಳ್ಳಿಯ ಹೊರಗೆ ಎಸೆದು ಹೋಗಿದ್ದರು.
ಆದರೆ ಆರೋಪಿಗಳು ಆತ್ಯಾಚಾರ ವೇಳೆ ಬಳಸಿದ ಸರ್ಕಾರಿ ಕಾಂಡೋಮ್ ಪ್ಯಾಕೆಟ್ ಆಕೆಯ ಶವದ ಜೊತೆ ಚೀಲದಲ್ಲಿಯೇ ಪತ್ತೆಯಾಗಿತ್ತು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಅದರ ಸಹಾಯದಿಂದಲೇ ತನಿಖೆ ಆರಂಭಿಸಿದ್ದ ಪೊಲೀಸರು ಇಡೀ ಪ್ರಕರಣವನ್ನ ಬೇಧಿಸಿದ್ದಾರೆ.
ಅದಲ್ಲದೆ ಕರಪತ್ರವನ್ನು ಮುದ್ರಿಸುವ ಮೂಲಕ ಮಹಿಳೆಯ ಮಾಹಿತಿಯನ್ನ ಪಡೆಯಲು ಪ್ರಯತ್ನಿಸಿದರು. ಅದರಂತೆ ಪೊಲೀಸರು ಮೊದಲು ಕಾಂಡೋಮ್‌ನ ಬ್ಯಾಚ್ ನಂಬರ್ ಬಗ್ಗೆ ತಿಳಿದುಕೊಂಡರು. ಈ ಮೂಲಕ ಆ ಕಾಂಡೋಮ್ ಮಿಹೋನಾ ಸರ್ಕಾರಿ ಆಸ್ಪತ್ರೆಯಿಂದ ವಿತರಿಸಲಾಗಿದೆ ಅನ್ನೋದು ತಿಳಿಯಿತು. ಇನ್ನು ಪೊಲೀಸರು ಕರಪತ್ರಗಳನ್ನ ವಿತರಿಸಿದ ಕಾರಣ, ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಿತ್ತು.
ಈಕೆ ಬಗ್ಗೆ ಕಂಪು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಕುಟುಂಬ ಸದಸ್ಯರು ಮಹಿಳೆಯ ಶವವನ್ನ ಗುರುತಿಸಿ, ಆಕೆಯ ಪತಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದಾರೆ. ನಂತರ ಈ ಘಟನೆಯಲ್ಲಿ ಶ್ಯಾಮು ಅನ್ನೋ ಯುವಕನ ಮೇಲೆ ಅನುಮಾನವಿದೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಅದರಂತೆ ಶ್ಯಾಮುವನ್ನ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಿಸಿದಾಗ ಆತ ಇಡೀ ಘಟನೆಯ ಬಗ್ಗೆ ವಿವರಿಸಿದ್ದಾನೆ.
ಅಂಕಿತ್ ಎಂಬ ಯುವಕ ರೋಶ್ನಿಯನ್ನ ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗುವ ಭರವಸೆ ನೀಡಿದ್ದ. ಅದರಂತೆ ಜೂ.೧೩ ರಂದು ಅಂಕಿತ್‌ನನ್ನು ಮದುವೆಯಾಗಲು ರೋಶ್ನಿ ಮೆಹಗಾಂವ್‌ಗೆ ಬಂದಿದ್ದಾಳೆ. ರೋಶ್ನಿ ಅಲ್ಲಿಗೆ ಬಂದ ಮೇಲೆ ಉಲ್ಟಾ ಹೊಡೆದ ಅಂಕಿತ್ ಮದುವೆಯಾಗಲು ನಿರಾಕರಿಸಿದ್ದಾನೆ. ಅದಲ್ಲದೆ ರೋಶ್ನಿ ಮನೆಗೆ ಹಿಂತಿರಲು ನಿರಾಕರಿಸಿದ್ದು, ಸಾಕಷ್ಟು ಮನವೊಲಿಸಿದ ನಂತರ ಅಂಕಿತ್ ಆಕೆಯನ್ನ ತನ್ನೊಂದಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಸ್ನೇಹಿತರಾದ ಪ್ರಶಿಸ್ ಖಾನ್ ಮತ್ತು ಸುಮಿತ್ ದಿವಾರ್, ಅಂಕಿತ್ ಜೊತೆ ಸೇರಿ ಮಹಿಳೆ ರೋಶ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಾಮೂಹಿಕ ಅತ್ಯ್ಯಾಚಾರದ ನಂತರ ಆಕೆಯನ್ನ ಕತ್ತು ಹಿಸುಕಿ ಸಾಯಿಸಿಲಾಗಿದೆ. ಆಮೇಲೆ ರೋಶ್ನಿಯ ದೇಹವನ್ನ ಗೋಣಿ ಚೀಲದಲ್ಲಿ ಕಟ್ಟಿ, ರಾತ್ರಿಯ ಕತ್ತಲೆಯಲ್ಲಿ ಅದನ್ನು ಕಾಮೋಖರಿ ಗ್ರಾಮದ ಹೊರಗೆ ಎಸೆದಿದ್ದಾರೆ.
ಸಧ್ಯ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.