Ad Widget .

ಡಿಸಿಎಂ ಪಟ್ಟ ಸೃಷ್ಟಿಸಲ್ಲ- ಸಿಎಂ ಬೊಮ್ಮಾಯಿ

ಬೆಂಗಳೂರು : ನಾನು ಪ್ರಮಾಣವಚನ ತೆಗೆದುಕೊಂಡ ಮೇಲೆ, ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಅಲ್ಲೇ ಸ್ಥಳದಲ್ಲಿಯೇ ಪರಿಹಾರವನ್ನು ಘೋಷಣೆ ಮಾಡಿದ್ದೇನೆ. ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ಘೋಷಣೆ ಮಾಡಿದ್ದೇನೆ. ಸಾಮಾಜಿಕ ಭದ್ರತೆಯ ಯೋಜನೆಗಳ ಹಣವನ್ನು ಹೆಚ್ಚಿಗೆ ಮಾಡಿದ್ದೇನೆ. ಇದಾದ ನಂತ್ರ ಸಚಿವ ಸಂಪುಟದ ವಿಸ್ತರಣೆ ಕುರಿತಂತೆ ಬಿಜೆಪಿ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ನಾವು ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆ ಆದ ಮೇಲೆ. ಇದೀಗ ಪಟ್ಟಿ ಅಂತಿಮಗೊಂಡಿದೆ. ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ಒಟ್ಟು 29 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಹುದ್ದೆಯನ್ನು ಈ ಬಾರಿ ಸೃಜಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Ad Widget . Ad Widget .

ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ನಮ್ಮ ಪ್ರಧಾನ ಮಂತ್ರಿಗಳಾದಂತ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಮಾರ್ಗದಲ್ಲಿ ಈಗಾಗಲೇ ಹೇಳಿದಂತೆ ಜನಪರ ಆಡಳಿತ ಕೊಡುವ ಹಿನ್ನಲೆಯಲ್ಲಿ ಸಂಪುಟ ರಚನೆ ಮಾಡಲಾಗುತ್ತಿದೆ.
ಅಲ್ಲದೇ ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಈ ಸಂಪುಟ ರಚನೆಯಾಗಿದೆ. ಇದು ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ, ವಿಶ್ವಾಸ ಗಳಿಸಿ, ನೂತನವಾದಂತ ಒಳ್ಳೆಯ ಆಡಳಿತ ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಇವತ್ತು ಪ್ರಮಾಣವಚನವನ್ನು 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕೃತವಾಗಿ ನೂತನ ಸಚಿವರ ಪಟ್ಟಿ ರಾಜಭವನದ ಕಚೇರಿಯಿಂದ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ ಎಂದರು.

Ad Widget . Ad Widget .

8 ಲಿಂಗಾಯತ ಸಮುದಾಯದವರಿಗೆ, 7 ಒಬಿಸಿ ಸಮುದಾಯದವರಿಗೆ, 7 ಒಕ್ಕಲಿಗ ಸಮುದಾಯದವರಿಗೆ, 3 ಎಸ್ಸಿ, 1 ಎಸ್ಟಿ ಹಾಗೂ ಮಹಿಳಾ ಶಾಸಕಿಯರು ಇಂದಿನ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಘೋಷಣೆ ಮಾಡಿದರು.

Leave a Comment

Your email address will not be published. Required fields are marked *