Ad Widget .

ಆ.4ರಂದು ರಾಜ್ಯ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ| ಹೊಸ ಸಚಿವರು ಯಾರು ಎಂಬುದೇ ಸಸ್ಪೆನ್ಸ್…!

ಬೆಂಗಳೂರು: ಬಹು ನಿರೀಕ್ಷಿತ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬುಧವಾರ (ಅ.04) ಸಂಜೆ 5ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

Ad Widget . Ad Widget .

ಅಳೆದು ತೂಗಿ ಹೈಕಮಾಂಡ್ ಸಚಿವರ ಪಟ್ಟಿ ಸಿದ್ಧಪಡಿಸಿದ್ದು, ಒಟ್ಟು 26 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ಹೆಸರುಗಳನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ.

Ad Widget . Ad Widget .

ನೂತನವಾಗಿ ಆಯ್ಕೆಯಾದ ಸಚಿವರಿಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲು ಸೂಚನೆ ಸಹ ಹೋಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಶಾಸಕರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕರೆತರದಂತೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಹೊರಡಿಸಲಾಗಿದೆ.

ವ್ಯಕ್ತಿತ್ವ, ಪಕ್ಷ ನಿಷ್ಠೆ, ಸಂಘಟಕ, ಜಾತಿ, ವರ್ಚಸ್ಸು ಸೇರಿದಂತೆ ಹಲವು ಮಾನದಂಡಗಳ ಮೇಲೆ ಅಂತಿಮವಾಗಿ 26 ಸಚಿವರ ಪಟ್ಟಿ ಮಾಡಿ ಸಿಎಂ ಬಸವರಾಜ ಬೊಮ್ಮಾಯಿಗೆ ಕೊಟ್ಟಿದೆ.

ಕೆಲವರಿಗೆ ಕೋಕ್, ರಾಮುಲು ಕೈತಪ್ಪಿದ ಡಿಸಿಎಂ

ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಲಕ್ಷಣ ಸವದಿ, ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿದ್ದು, ಡಿಸಿಎಂ ಸ್ಥಾನ ಕಳೆದುಕೊಂಡರೂ ಸಚಿವ ಸ್ಥಾನ ಉಳಿಸಿಕೊಳ್ಳುವಲ್ಲಿ ಗೋವಿಂದ ಕಾರಜೋಳ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆರ್. ಶಂಕರ್, ಪ್ರಭು ಚೌಹಾಣ್ ಅವರನ್ನು ಕೈಬಿಡಲಾಗಿದೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಶ್ರೀರಾಮುಲು ದಿನದಿಂದ ದಿನಕ್ಕೆ ತಮ್ಮ ಸ್ಥಾನವನ್ನು ಬಿಜೆಪಿಯಲ್ಲಿ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಡಿಸಿಎಂ ಹುದ್ದೆಯನ್ನು ಹಿಂಪಡೆದು, ಸಚಿವ ಸ್ಥಾನ ಮಾತ್ರ ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

Leave a Comment

Your email address will not be published. Required fields are marked *