Ad Widget .

ಸುಳ್ಯ ಸೇರಿದಂತೆ ರಾಜ್ಯದ ಹಲವು ಪಟ್ಟಣಗಳು ಕೋವಿಡ್ ಹಾಟ್ ಸ್ಪಾಟ್| ಆತಂಕ ಮೂಡಿಸಿದ ವರದಿ|

ಮಂಗಳೂರು: ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಮತ್ತೆ ರಾಜ್ಯದಲ್ಲಿ ಕೋವಿಡ್ ಆತಂಕ ಎದುರಾಗಿದೆ. ಈ ಹಿನ್ನಲೆ ಕೆಲವು ನಗರಗಳನ್ನು ಕೋವಿಡ್‌ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯಾದ್ಯಂತ ನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬರುತ್ತಿದೆ. ಇದರ ಜೊತೆಗೆ ನೆರೆಯ ರಾಜ್ಯ ಕೇರಳದಲ್ಲಿ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ದಕ್ಷಿಣ ಕನ್ನಡ, ಮಡಿಕೇರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು ಹೆಚ್ಚು ಕಂಡುಬರುತ್ತಿದೆ.

Ad Widget . Ad Widget . Ad Widget .

ಅತಿ ಹೆಚ್ಚು ಸೋಂಕು ಪತ್ತೆಯಾದ 20 ನಗರಗಳಲ್ಲಿ ದಕ್ಷಿಣ ಕನ್ನಡದಲ್ಲಿ ನಾಲ್ಕು, ಉತ್ತರ ಕನ್ನಡದಲ್ಲಿ ಮೂರು, ಕೊಡಗು ಮತ್ತು ಬೆಳಗಾವಿಯಲ್ಲಿ ಎರಡು, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಬೀದರ್‌, ಕಲಬುರಗಿ, ಉಡುಪಿ ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ತಲಾ ಒಂದು ನಗರಗಳು ಸೇರಿಕೊಂಡಿದೆ. ಇನ್ನೂ ಕೊಪ್ಪಳ (ಶೇ.1100), ದಾವಣಗೆರೆಯ ಹರಿಹರ (ಶೇ.750), ಬೆಳಗಾವಿಯ ಹುಕ್ಕೇರಿ (ಶೇ.500), ಉತ್ತರ ಕನ್ನಡದ ಯಲ್ಲಾಪುರ (ಶೇ.333), ಕೋಲಾರದ ಮಾಲೂರು (ಶೇ.260) ನಗರದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿದೆ.

ಹಳ್ಳಿಗಳಲ್ಲಿ ಸೋಂಕು ಪತ್ತೆಯಲ್ಲಿ ಕರಾವಳಿ ಜಿಲ್ಲೆಗಳು ಮುಂದಿದ್ದರೆ, ನಗರಗಲ್ಲಿ ಹೊಸ ಸೋಂಕಿತರು ಪತ್ತೆಯಾಗುವುದರಲ್ಲಿ ಉತ್ತರ ಕರ್ನಾಟಕ ಜಿಲ್ಲೆ ಮುಂದಿದೆ.

ಕೋವಿಡ್‌ ಹಾಟ್‌ಸ್ಪಾಟ್‌:

ದಕ್ಷಿಣ ಕನ್ನಡದ ಕೋಟೆಕಾರ್‌, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು, ಉತ್ತರ ಕನ್ನಡದ ಶಿರಸಿ, ಕಾರವಾರ, ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ, ಚಿತ್ರದುರ್ಗದ ಹಿರಿಯೂರು, ಕಲಬುರಗಿ, ಬೀದರ್‌, ಉಡುಪಿಯ ಕುಂದಾಪುರ, ಬಳ್ಳಾರಿ, ಬೆಳಗಾವಿಯ ರಾಯಭಾಗ, ಚಿಕ್ಕಮಗಳೂರಿನ ಎನ್‌.ಆರ್‌. ಪುರ, ಚಿತ್ರದುರ್ಗದ ಹಿರಿಯೂರು ನಗರಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

Leave a Comment

Your email address will not be published. Required fields are marked *