Ad Widget .

ರಾಜ್ಯ ಸಚಿವ ಸಂಪುಟ ನಾಳೆಯೇ ಫೈನಲ್, ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ- ಸಿಎಂ ಬೊಮ್ಮಾಯಿ

Ad Widget . Ad Widget .

ನವದೆಹಲಿ: ಇಂದು ಸಂಜೆ ಅಥವಾ ನಾಳೆ ಸಚಿವ ಸಂಪುಟ ರಚನೆ ಫೈನಲ್ ಆಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಲೆನ್ಸ್ ಸಂಪುಟ ರಚನೆಗೆ ಒತ್ತು ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Ad Widget . Ad Widget .

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸಿದ್ದೇನೆ. ಎಲ್ಲಾ ಶಾಸಕರು ಸಚಿವರಾಗಲು ಸಾಧ್ಯವಾಗದು. ಪ್ರಾದೇಶಿಕ ಸಮತೋಲನ ಕಾಪಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾವೆಲ್ಲ ಆಧಾರದ ಮೇಲೆ ಹಾಗೂ ಎಷ್ಟು ಹಂತದಲ್ಲಿ ಸಂಪುಟ ರಚನೆ ಮಾಡಬೇಕು ಎಂಬ ಬಗ್ಗೆ ವರಿಷ್ಠರನ್ನು ಭೇಟಿಯಾಗಿ ತೀರ್ಮಾನಿಸಲಾಗುವುದು ಎಂದರು.

ಜೆ.ಪಿ.ನಡ್ಡಾ ಭೇಟಿಗೂ ಮುನ್ನ ಸಂಸತ್ ಭವನಕ್ಕೆ ಹೋಗಿ ಅಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು. ನಂತರ ನಡ್ಡಾ ಭೇಟಿಯಾಗುತ್ತೇನೆ. ಇಂದು ಸಂಜೆ ಅಥವಾ ನಾಳೆ ನೂತನ ಮಂತ್ರಿಮಂಡಲ ರಚನೆ ಫೈನಲ್ ಆಗಲಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *