ಕಾರ್ಕಳ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಫಾಲ್ಸ್ ನಲ್ಲಿ ಮುಳುಗಿ ಸಾವು

Ad Widget ... ..

ಕಾರ್ಕಳ : ಈಜಲು ಹೊಗಿದ್ದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಸೋಮವಾರ ಸಂಭವಿಸಿದೆ.

Ad Widget

ವರ್ಷಿತಾ (19 ವರ್ಷ) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಮೂಲತಃ ಮಂಗಳೂರಿನವಳಾಗಿದ್ದು ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತಿದ್ದಳು ಎನ್ನಲಾಗಿದೆ.
ವರ್ಷಿತಾ ಮತ್ತು ಇನ್ನೋರ್ವ ವಿದ್ಯಾರ್ಥಿನಿ ಸೇರಿ ಪಾಲ್ಸ್ ಗೆ ತೆರಳಿದ್ದು ಈಜಲೆಂದು ನೀರಿಗೆ ಇಳಿದಿದ್ದರು. ಈ ವೇಳೆ ಮುಳುಗಿದ್ದಾಳೆ ಎನ್ನಲಾಗಿದೆ, ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *