Ad Widget .

ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ|

Ad Widget . Ad Widget .

ಅಟ್ಲಾಂಟಾ: ಅವಳಿ ಮಕ್ಕಳು, ತ್ರಿವಳಿ ಮಕ್ಕಳು, ನಾಲ್ಕು-ಐದು ಮಕ್ಕಳು ಒಟ್ಟಿಗೆ ಹುಟ್ಟುವುದನ್ನು ಕೇಳಿರುತ್ತೀರಿ. ಆದರೆ ಈ ದಂಪತಿ ಕಥೆಯೇ ಬೇರೆ. ಜಾರ್ಜಿಯಾದ ದಂಪತಿ ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಅದು ಹೇಗೆ ಗೊತ್ತಾ?…

Ad Widget . Ad Widget .

ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ತುರ್ಕ್ ಮತ್ತು ಗಾಲಿಪ್​ಗೆ 20 ಪ್ಲಸ್​ ಒಂದು ಒಟ್ಟು 21 ಮಕ್ಕಳು. ಗಾಲಿಪ್​ ವಯಸ್ಸು 53 ವರ್ಷವಾದರೆ ಕ್ರಿಸ್ಟಿನಾ ಇನ್ನೂ 23 ವರ್ಷದವಳು. ಈ ದಂಪತಿಗೆ ಆರು ವರ್ಷದ ವಿಕ್ಟೋರಿಯಾ ಹೆಸರಿನ ಮಗಳಿದ್ದಾಳೆ. ಆದರೆ ಕ್ರಿಸ್ಟಿಯಾಗೆ ಮೊದಲಿನಿಂದಲೂ ದೊಡ್ಡ ಕುಟುಂಬ ಮಾಡಿಕೊಳ್ಳಬೇಕೆಂಬ ಆಸೆಯಿತ್ತಂತೆ. ಆ ಆಸೆಗೆ ಒಪ್ಪಿದ ಮೇಲೆಯೇ ಕೋಟ್ಯಧಿಪತಿ ಗಾಲಿಪ್​​ನನ್ನು ಮದುವೆಯಾಗಿದ್ದಳಂತೆ.

ಕ್ರಿಸ್ಟಿಯಾಳ ದೊಡ್ಡ ಕುಟುಂಬದ ಕನಸು ಈ ವರ್ಷ ನೆರವೇರಿದೆ.
ಇದೊಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳು ಕ್ರಿಸ್ಟಿಯಾಳ ಮಡಿಲು ಸೇರಿವೆ. ಅಂದ ಹಾಗೆ ಈ ಎಲ್ಲ ಮಕ್ಕಳು ಬಾಡಿಗೆ ತಾಯಂದಿರಿಗೆ ಹುಟ್ಟಿದ್ದಂತೆ. ಮಕ್ಕಳನ್ನು ಹೆರುವುದಕ್ಕಾಗಿ ಬಾಡಿಗೆ ತಾಯಂದಿರಿಗೆ ಬರೋಬ್ಬರಿ 1.42 ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ. ಕಳೆದ ವರ್ಷ ಮಾರ್ಚ್​ನಲ್ಲಿ ಮೊದಲ ಬಾಡಿಗೆ ತಾಯಿಯಿಂದ ಮಗು ಪಡೆದ ನಂತರ ಒಂದೊಂದಾಗಿ ಮಕ್ಕಳನ್ನು ಪಡೆಯುತ್ತಾ ಬರಲಾಗಿದೆ. ಈಗ ಕ್ರಿಸ್ಟಿನಾ ಬಳಿ 4 ತಿಂಗಳ ಮಕ್ಕಳಿಂದ ಹಿಡಿದು 14 ತಿಂಗಳ ಮಕ್ಕಳೂ ಇದ್ದಾರೆ.

ಈ ಮಕ್ಕಳಿಗೆ ವಾರವೊಂದಕ್ಕೆ ಸುಮಾರು ಮೂರರಿಂದ ನಲ್ಕು ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ. ಇವರನ್ನು ನೋಡಿಕೊಳ್ಳಲೆಂದೇ 16 ಜನರನ್ನು ನೇಮಿಸಿಕೊಳ್ಳಲಾಗಿದೆ. ಕ್ರಿಸ್ಟಿನಾ ಕೂಡ ದಿನದ ಅಷ್ಟೂ ಸಮಯವನ್ನು ಮಕ್ಕಳಿಗಾಗಿಯೇ ಮುಡಿಪಾಗಿಡುತ್ತಾಳಂತೆ. ಇಷ್ಟಕ್ಕೆ ಕುಟುಂಬ ನಿಲ್ಲಿಸುವ ಮನಸ್ಸು ಆಕೆಗಿಲ್ಲವಂತೆ. ಗಾಲಿಪ್​ ಜತೆ ಇನ್ನೊಂದು ಮಗು ಮಾಡಿಕೊಳ್ಳುವ ಆಸೆಯಿದೆ. ನಾನೇ ಗರ್ಭಿಣಿಯಾಗಿ ಮಗುವನ್ನು ಹರಬೇಕೆನ್ನುವ ಮನಸ್ಸಿದೆ. ಈ ಮಕ್ಕಳ ಜತೆ ಕಾಲ ಕಳೆಯುತ್ತಿರುವುದರಿಂದಾಗಿ ಕೆಲ ಸಮಯದ ನಂತರ ನಾನು ಮತ್ತೆ ಗರ್ಭಿಣಿಯಾಗುತ್ತೇನೆ ಎನ್ನುತ್ತಾಳೆ ಕ್ರಿಸ್ಟಿನಾ

Leave a Comment

Your email address will not be published. Required fields are marked *