ಬೆಂಗಳೂರು : ಕಳೆದ ದಿನಗಳಲ್ಲಿ ವಿಪರೀತ ಮಳೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಗಿ ಮನೆಮಠ ಕಳೆದುಕೊಂಡವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ಘೋಷಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿನ ನೆರೆ, ಪ್ರವಾಹ ಪೀಡಿತ ಜಿಲ್ಲೆಗಳ ಸಮಗ್ರ ನಿರ್ವಹಣಾ ಕಾರ್ಯದಲ್ಲಿ ಸರ್ಕಾರ ತೊಡಗಿದೆ. ನೆರೆ, ಪ್ರವಾಹದಿಂದಾಗಿ 13 ಜಿಲ್ಲೆಗಳು ಪೀಡಿತಗೊಂಡಿವೆ. ಈ ಜಿಲ್ಲೆಗಳಲ್ಲಿನ 466 ಗ್ರಾಮಗಳ ಜನರು ನೆರೆ, ಪ್ರವಾಹ ಪೀಡಿತರಾಗಿದ್ದಾರೆ. ಇವರಿಗೆ ತುರ್ತು ಪರಿಹಾರ ಕಾರ್ಯ ಕೈಗೊಳ್ಳೋದಕ್ಕಾಗಿ ಸರ್ಕಾರ 600 ಕೋಟಿಯನ್ನು ಬಿಡುಗಡೆ ಮಾಡಿರೋದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
13 ಜಿಲ್ಲೆಗಳ, 466 ಗ್ರಾಮಗಳು ನೆರೆ, ಪ್ರವಾಹ ಪೀಡಿತಗೊಂಡಿವೆ. ಇದುವರೆಗೆ 13 ಜನರು ನೆರೆಯಿಂದಾಗಿ ಸಾವನ್ನಪ್ಪಿದ್ದಾರೆ. ತುರ್ತು ಕಾಮಗಾರಿಗಾಗಿ ನೆರೆ ಪೀಡಿತ ಜಿಲ್ಲೆಗಳ ಡಿಸಿ ಖಾತೆಗಳಿಗೆ 600 ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಅವರ ಖಾತೆಗಳಲ್ಲಿ 700 ಕೋಟಿಗೂ ಹೆಚ್ಚು ಹಣ ಈಗಾಗಲೇ ಇದೆ ಎಂದು ಹೇಳಿದರು.
ಇನ್ನೂ ನೆರೆ, ಪ್ರವಾಹದಿಂದಾಗಿ ಮನೆ, ಬೆಳೆ ನಾಶದ ಬಗ್ಗೆ 15 ದಿನಗಳಲ್ಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಈಗಾಗಲೇ ನೆರೆ ಸಂತ್ರಸ್ತರಾದಂತವರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ, ಪ್ರವಾಹದಿಂದಾಗಿ ಸಂಪೂರ್ಣವಾಗಿ ಮನೆ ನಾಶಗೊಂಡಿದ್ದರೇ 5 ಲಕ್ಷ, ಭಾಗಶ: ಹಾನಿಗೊಂಡಿದ್ದರೇ 3 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದರೇ 50 ಸಾವಿರ ಪರಿಹಾರವನ್ನು ನೀಡೋದಾಗಿ ತಿಳಿಸಿದರು.