Ad Widget .

ಜೂಜು‌ ದಂಧೆ ಪ್ರಕರಣ| ಹರಿರಾಜ್ ಶೆಟ್ಟಿ ಮೇಲೆ ಚಾರ್ಜ್ ಶೀಟ್

Ad Widget . Ad Widget .

ಬೆಂಗಳೂರು: ಮಹಾನಗರದ ಹಲವು ಕಡೆ ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಮುಂಗಾರು ಮಳೆ-2 ಸಿನಿಮಾ ಖ್ಯಾತಿಯ ನಟಿ ನೇಹಾ ಶೆಟ್ಟಿ ತಂದೆ, ಉದ್ಯಮಿ ಹರಿರಾಜ್ ಶೆಟ್ಟಿಯನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗ್ಯಾಬ್ಲಿಂಗ್ ಉದ್ಯಮಿ ಹರಿರಾಜ್ ಶೆಟ್ಟಿ, ಮಹಿಳೆಯರು ಸೇರಿದಂತೆ ಒಟ್ಟು 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

Ad Widget . Ad Widget .

ಇವರು ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ ಕ್ಲಬ್ ನಿರ್ಮಿಸಿ ಅದರಲ್ಲಿ ಜೂಜು, ವಿಡಿಯೋ ಗೇಮ್ ಪಾರ್ಲಲ್, ಬ್ಯಾನ್ ಸ್ಕಿಲ್ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪೂಲ್ ಎಂ ಕ್ಲಬ್ ಹೆಸರಿನಲ್ಲಿ ಹರಿರಾಜ್ ಶೆಟ್ಟಿ ಜೂಜು ಅಡ್ಡೆ ನಡೆಸುತ್ತಿದ್ದರು.ವಿಷಯ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 42 ಜೂಜುಕೋರರು ಸಿಕ್ಕಿಬಿದ್ದಿದ್ದಾರೆ. ಜೊತೆ ಲಕ್ಷ ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯದ ಜೂಜುಕೋರರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಕಾನೂನು ಬಾಹಿರ ಕೃತ್ಯಕ್ಕೆ ಹರಿರಾಜ್ ಶೆಟ್ಟಿ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಬಂಧಿತ 42 ಮಂದಿಯಲ್ಲಿ 5 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಉದ್ಯಮಿಗಳ ಪತ್ನಿಯರು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಮತ್ತು ಮತ್ತೋರ್ವ ಮಹಿಳೆ ರೌಡಿ ಶೀಟರ್ ತಾಯಿ ಎನ್ನಲಾಗಿದೆ.
ಹರಿರಾಜ್ ಬೆಂಗಳೂರಿನಲ್ಲಿ ಸುಮಾರು 14ಕ್ಕೂ ಹೆಚ್ಚು ಕಡೆ ಜೂಜು ಅಡ್ಡಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಜೂನ್ 5ರಂದು ಹರಿರಾಜ್ ಬಂಧಿಸಲಾಗಿತ್ತು. ಹರಿರಾಜ್ ವಿರುದ್ಧ ಈಗಾಗಲೇ 19 ಪ್ರಕರಣಗಳು ದಾಖಲಾಗಿದೆ.

Leave a Comment

Your email address will not be published. Required fields are marked *