Ad Widget .

ಸೊಸೆಯ ಕಾಮದಾಹಕ್ಕೆ ಕೊನೆ ಹಾಡಿದ ಮಾವ…! ಆತ ಮಾಡಿದ್ದೇನು ಗೊತ್ತಾ?

Ad Widget . Ad Widget .

ಆಂದ್ರಪ್ರದೇಶ: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯನ್ನು ಮಾವನೇ ಕೊಲೆಮಾಡಿದ ಘಟನೆ ರಾಜಮಂಡ್ರಿಯಲ್ಲಿ ನಡೆದಿದೆ.

Ad Widget . Ad Widget .

ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂ ನಿವಾಸಿಯಾಗಿರುವ 25 ವರ್ಷದ ಪ್ರಿಯಾಮಣಿ ಮೃತಪಟ್ಟ ಮಹಿಳೆ. ಕೊಲೆ ಆರೋಪಿ ಆಕೆಯ ಮಾವ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

ಸತ್ಯನಾರಾಯಣನ ಮಗ ವಿಜಯಕುಮಾರ್ ಕತಾರ್ ನಲ್ಲಿ ಕೆಲಸದಲ್ಲಿದ್ದಾನೆ. ವಿಜಯಕುಮಾರ್ ಪತ್ನಿ ಪ್ರಿಯಾಮಣಿ ಪೋಷಕರು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿದ್ದು, ಈ ನಡುವೆ ಪ್ರಿಯಾಮಣಿ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಇದರಿಂದಾಗಿ ಗಂಡನ ಕುಟುಂಬದವರು ಹಾಗೂ ಆಕೆಯ ತವರು ಮನೆಯವರ ನಡುವೆ ಜಗಳವಾಗಿತ್ತು.

ಜುಲೈ 22 ರಂದು ಸತ್ಯನಾರಾಯಣ ಬೇರೆ ಯುವಕನೊಂದಿಗೆ ಓಡಿ ಹೋಗಿದ್ದಾಳೆ ಎಂದು ಸೊಸೆ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದರು.
ಪೊಲೀಸರು ರಾಜಿ ನಡೆಸಿದ್ದರಿಂದ ಪ್ರಿಯಾಮಣಿ ಗಂಡನ ಮನೆ ಸೇರಿಕೊಂಡಿದ್ದಳು. ಅಲ್ಲಿಗೆ ಆಕೆಯ ತಾಯಿ ಕೂಡ ಬಂದಿದ್ದಳು. ಶುಕ್ರವಾರ ರಾತ್ರಿ ಸತ್ಯನಾರಾಯಣ ಮತ್ತು ಪ್ರಿಯಾಮಣಿ ಅವರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಆಕೆಯ ತಾಯಿ ಎದುರಲ್ಲೇ ಸತ್ಯನಾರಾಯಣ ಪ್ರಿಯಾಮಣಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಮಗ ವಿದೇಶದಲ್ಲಿದ್ದಾಗಲೇ ಅಕ್ರಮ ಸಂಬಂಧದ ಕಾರಣಕ್ಕೆ ಸತ್ಯನಾರಾಯಣ ಸೊಸೆಯನ್ನು ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *