July 2021

ಯಡಿಯೂರಪ್ಪನವರಿಗೆ ಮದುವೆ ಮಾಡಿದರೆ 2 ಮಕ್ಕಳು ಮಾಡ್ತಾರೆ – ನಾಲಿಗೆ ಹರಿಬಿಟ್ಟ ಸಿ.ಎಂ ಇಬ್ರಾಹಿಂ‌

ಬೆಂಗಳೂರು: ಬಿ.ಎಸ್‌. ವೈ ರಾಜೀನಾಮೆಗೆ ಒತ್ತಡ ಹಾಕಿರುವುದು ಸರಿಯಲ್ಲ. ಅವರಿಗೆ ಈಗ ಮದುವೆ ಮಾಡಿದರೆ ಎರಡು ಮಕ್ಕಳು ಮಾಡುತ್ತಾರೆ. ಅಷ್ಟು ಶಕ್ತಿ ಅವರಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ. ರಾಜಕೀಯ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ಹೀಗೆ ಅಧಿಕಾರ ಹಿಂಪಡೆಯುವುದು ಒಳ್ಳೇ ಸಂಪ್ರದಾಯವಲ್ಲ. ನಾನು ಅವರ ಜಿಲ್ಲೆಯವನು. ಅವರ ಜಿಲ್ಲೆಯವನಾಗಿ ನಾನು ಅವರಿಗೆ ಧೈರ್ಯ ಹೇಳಲು ಬಂದಿದ್ದೆ. ನಾನು ಕಾಂಗ್ರೆಸ್ ಪಕ್ಷದವನಾಗಿ ಬಂದಿಲ್ಲ. ಮಲೆನಾಡಿನವನಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.ವಲಸಿಗರ ಸ್ಥಿತಿ ಶೋಚನೀಯಕ್ಕೆ ತಿರುಗಿದೆ. ನಾನು […]

ಯಡಿಯೂರಪ್ಪನವರಿಗೆ ಮದುವೆ ಮಾಡಿದರೆ 2 ಮಕ್ಕಳು ಮಾಡ್ತಾರೆ – ನಾಲಿಗೆ ಹರಿಬಿಟ್ಟ ಸಿ.ಎಂ ಇಬ್ರಾಹಿಂ‌ Read More »

ಕುಂದಾಪುರ: ನದಿಗೆ ಬಿದ್ದ ಮಗು ಮೃತ್ಯು

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ವರ್ಷದ ಮಗು ಮನೆ ಸಮೀಪದ ನದಿ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಯಾತಪ್ಪಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಉಪ್ಪುಂದ ಗ್ರಾಮದ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾರ್ವಿ ಅವರ ಮಗ ಸರ್ವದ (೨) ಎಂದು ಗುರುತಿಸಲಾಗಿದೆ. ಈ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದರು. ಇದೇ ವೇಳೆ ಮನೆಯ ಕೋಣೆಯಲ್ಲಿ ಮಲಗಿದ್ದ ಮಗು ಎದ್ದು ಮನೆಯಿಂದ ಹೊರಗೆ

ಕುಂದಾಪುರ: ನದಿಗೆ ಬಿದ್ದ ಮಗು ಮೃತ್ಯು Read More »

ಜೈಲಿನಿಂದ ಹೊರ ಬಂದಿದ್ದ ಮನೆಗಳ್ಳನ ಬರ್ಬರ ಹತ್ಯೆ

ಕಲಬುರಗಿ: ಹಳೆ ದ್ವೇಶದ ಹಿನ್ನಲೆ ಮನೆಗಳ್ಳನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹೇಶ್ ಚಿಡರಗುಂಪಿ (38) ಕೊಲೆಯಾದ ದುರ್ದೈವಿಯಾಗಿದ್ದಾನೆ. ಕಳೆದ ರಾತ್ರಿ ನಗರದ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಹಳೆ ದ್ವೇಷ ಹಿನ್ನಲೆ ಯಾರೋ ದುಷ್ಕರ್ಮಿಗಳು ಆತನನ್ನು ಮನಬಂದಂತೆ ಥಳಿಸಿ ನಂತರ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈತ ನಗರದಲ್ಲಿ ಹಾಡುಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದನು ಅಲ್ಲದೆ ಈತನಿಗೆ ಜೈಲೇ

ಜೈಲಿನಿಂದ ಹೊರ ಬಂದಿದ್ದ ಮನೆಗಳ್ಳನ ಬರ್ಬರ ಹತ್ಯೆ Read More »

ಮನೆ ಬಿಟ್ಟು ಹೋದ ಪತ್ನಿ- ಜೀವ ಬಿಟ್ಟ ಪತಿ ಎರಡು ದಿನದ ಬಳಿಕ ಶವ ಪತ್ತೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿ ಮನೆ ಬಿಟ್ಟು ಹೋದ ವಿಚಾರವಾಗಿ ಮನನೊಂದ ಪತಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಶಿವಗಂಗಾ ವೃತ್ತದಲ್ಲಿ ನಡೆದಿದೆ. ಶಿವರಾಮ್ (42) ನೇಣಿಗೆ ಶರಣಾದ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಈ ಕುರಿತಾಗಿ ಮನನೊಂದ ಗಂಡ ತಾನು ವಾಸವಾಗಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ದಿನಗಳಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯ ನೋಡಿದ್ದಾರೆ. ಎರಡು ದಿನಗಳ ಹಿಂದೆ

ಮನೆ ಬಿಟ್ಟು ಹೋದ ಪತ್ನಿ- ಜೀವ ಬಿಟ್ಟ ಪತಿ ಎರಡು ದಿನದ ಬಳಿಕ ಶವ ಪತ್ತೆ Read More »

ಚುಡಾಯಿಸುತ್ತಿದ್ದವರು ನಾಚಿಸುವಂತೆ ಬೆಳೆದ ‘ಅಭಿನಯ ಶಾರದೆ’| ದುಂಡುಮಲ್ಲಿಗೆ ಕಮಲಾ‌ಕುಮಾರಿ ಜಯಂತಿ ಆದ‌ ಕಥೆ|

ಬೆಂಗಳೂರು: ದುಂಡಗೆ, ದಪ್ಪಗಿದ್ದ ಬಾಲಕಿಯನ್ನು ಸಹಪಾಠಿಗಳು ಚುಡಾಯಿಸುತ್ತಿದ್ದರು. ಆದರೂ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದ ಆ ಬಾಲೆ ಶಾಲೆಯಲ್ಲಿ ನೃತ್ಯ ಮಾಡಿ ಸೈ ಎನ್ನಿಸಿಕೊಂಡಿದ್ದಲ್ಲದೆ, ಪ್ರಶಸ್ತಿಯನ್ನೂ ಪಡೆದು ನಗೆ ಬೀರಿದಳು. ನಿರಂತರವಾಗಿ ತೆಲುಗು ಸಿನಿಮಾಗಳನ್ನು ನೋಡುತ್ತಿದ್ದ ಆ ಬಾಲೆಗೆ ಎ.ನಾಗೇಶ್ವರರಾವ್​ ಮತ್ತು ಎನ್​.ಟಿ. ರಾಮರಾವ್​ ಅವರ ಅಭಿನಯ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹತ್ತನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಆ ಬಾಲೆಗೆ ತಾನು ಪಂಚಭಾಷಾ ನಟಿ ಆಗುತ್ತೇನೆ, ಅಭಿನಯ ಶಾರದೆ ಎಂಬ ಹೆಸರು ಪಡೆಯುವೆ ಎಂಬ ಒಂದು ಸಣ್ಣ ಸುಳಿವೂ ಇರಲಿಲ್ಲ…

ಚುಡಾಯಿಸುತ್ತಿದ್ದವರು ನಾಚಿಸುವಂತೆ ಬೆಳೆದ ‘ಅಭಿನಯ ಶಾರದೆ’| ದುಂಡುಮಲ್ಲಿಗೆ ಕಮಲಾ‌ಕುಮಾರಿ ಜಯಂತಿ ಆದ‌ ಕಥೆ| Read More »

ಆಸ್ಕರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ- ಇದು‌ ಮಂಜುನಾಥನ ಪ್ರಸಾದ ಮಹಿಮೆ!?

ಮಂಗಳೂರು: ಇಲ್ಲಿನ ಯೆನಪೋಯ ಆಸ್ಪತ್ರೆಯಲ್ಲಿ ಕಳೆದ ಕೆಳವು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್‌ಗೆ ಮಾಡಲಾದ ಮೆದುಳಿನ ಶಸ್ತ್ರ ಚಿಕಿತ್ಸೆ ಯಶಸ್ವಿ ಯಾಗಿದ್ದು ಗುಣಮುಖರಾಗುತ್ತಿದ್ದಾರೆ. ಆಸ್ಕರ್ ಫರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ತಲೆಯ ಒಳಭಾಗದಲ್ಲಿ ಗಾಯವಾಗಿತ್ತು. ಕಳೆದ ಒಂದು ವಾರದಿಂದ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದ ಅವರು ತೀವ್ರ ನಿಗಾ ಘಟಕದಲ್ಲಿದ್ದರು. ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ ಮೆದುಳಿನ

ಆಸ್ಕರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ- ಇದು‌ ಮಂಜುನಾಥನ ಪ್ರಸಾದ ಮಹಿಮೆ!? Read More »

ಬಿಎಸ್‌ವೈ ರಾಜೀನಾಮೆ: ನೇಣಿಗೆ ಶರಣಾದ ಅಭಿಮಾನಿ

ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿ ಓರ್ವ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ನಿವಾಸಿಯಾದ ರವಿ (೩೫) ನೇಣಿಗೆ ಶರಣಾಗಿರುವ ವ್ಯಕ್ತಿ. ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದನು. ನಿನ್ನೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ. ನಿನ್ನೆ ಹೋಟೆಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಿಎಸ್‌ವೈ ರಾಜೀನಾಮೆ: ನೇಣಿಗೆ ಶರಣಾದ ಅಭಿಮಾನಿ Read More »

ತಂದೆಯ ಮರಣದ‌ ನಡುವೆಯೂ ಪ್ರಮಾಣವಚನ ಸ್ವೀಕರಿಸಿದವರಿಗೆ ಕಣ್ಣೀರಿನ‌ ಅರ್ಥ‌ ತಿಳಿವುದೇ? – ಡಿಕೆಶಿಗೆ ಬಿಜೆಪಿ ತಿರುಗೇಟು

ಬೆಂಗಳೂರು: ‘ತಂದೆ ಮರಣಹೊಂದಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇತಿಹಾಸ ನಿಮ್ಮದು’ ಎಂದು ಟ್ವೀಟ್‌ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ತಿರುಗೇಟು ನೀಡಿದೆ. ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ವಿಷಯ ಪ್ರಸ್ತಾಪಿಸುವಾಗ ಕಣ್ಣೀರು ಹಾಕಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರು ಯಾರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಡಿಕೆಶಿ ಹೇಳಿಕೆಗೆ

ತಂದೆಯ ಮರಣದ‌ ನಡುವೆಯೂ ಪ್ರಮಾಣವಚನ ಸ್ವೀಕರಿಸಿದವರಿಗೆ ಕಣ್ಣೀರಿನ‌ ಅರ್ಥ‌ ತಿಳಿವುದೇ? – ಡಿಕೆಶಿಗೆ ಬಿಜೆಪಿ ತಿರುಗೇಟು Read More »

ನಳಿನ್ ಮನಸ್ಸು ಮಾಡಿದ್ದಲ್ಲಿ ಅಂಗಾರ ಸಿಎಂ ಆಗ್ಬಹುದು- ರಮಾನಾಥ ರೈ

ಮಂಗಳೂರು: ಬಿಜೆಪಿಯವರ ಒಳ ಜಗಳದಿಂದಾಗಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ನಳಿನ್ ಕುಮಾರ್ ಕಟೀಲ್ ಮನಸ್ಸು ಮಾಡಿದ್ದಲ್ಲಿ ಸಚಿವ ಎಸ್. ಅಂಗಾರ ಅವರನ್ನು ಸಿಎಂ ಮಾಡಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯವರು ನುಡಿದಂತೆ ನಡೆಯುವುದಿಲ್ಲ. ಬಿಜೆಪಿಯ ಸಂಪೂರ್ಣ ಮಂತ್ರಿ ಮಂಡಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂದೆ ಯಾರೇ ಬಂದ್ರೂ ಸರಿಯಾಗದ ಸ್ಥಿತಿಯಲ್ಲಿದೆ. ಜನತಾ ಪರಿವಾರದಲ್ಲಿ ಇಲ್ಲಿಯ ತನಕ ದುರ್ಬಲ ವರ್ಗದವರನ್ನು ಸಿಎಂ ಮಾಡಿಲ್ಲ. ಆದರೆ,

ನಳಿನ್ ಮನಸ್ಸು ಮಾಡಿದ್ದಲ್ಲಿ ಅಂಗಾರ ಸಿಎಂ ಆಗ್ಬಹುದು- ರಮಾನಾಥ ರೈ Read More »

ಕುಕ್ಕೆ: ಇಂದಿನಿಂದ ಪೂಜಾ ಕೈಂಕರ್ಯಗಳಿಗೆ ಅವಕಾಶ- ಜು.29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಆರಂಭ

ಪ್ರಸಿದ್ದ ಯಾತ್ರಾಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ(ಜು.27) ಕೆಲವೊಂದು ಸೇವೆಗಳು ಆರಂಭಗೊಳ್ಳಲಿದ್ದು, ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29 ರಿಂದ ಪ್ರಾರಂಭಗೊಳ್ಳಲಿದೆ. ಸರಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ಸರ್ಪಸಂಸ್ಕಾರ, ಆಶ್ಲೇಷ

ಕುಕ್ಕೆ: ಇಂದಿನಿಂದ ಪೂಜಾ ಕೈಂಕರ್ಯಗಳಿಗೆ ಅವಕಾಶ- ಜು.29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಆರಂಭ Read More »